G20 ವರ್ಚುವಲ್‌ ಶೃಂಗಸಭೆ: G20 ನಾಯಕರಿಗೆ ಚೀನಾ ಪ್ರೀಮಿಯರ್‌ ಲಿ ಕಿಯಾಂಗ್‌ ಕರೆ!

masthmagaa.com:

ಜಾಗತಿಕ ಆರ್ಥಿಕತೆಯನ್ನ ರಿಕವರಿ ಮಾಡೋ ವಿಚಾರವಾಗಿ ಪ್ರಾಕ್ಟಿಕಲ್‌ ಸ್ಟೆಪ್ಸ್‌ ತೆಗೆದುಕೊಳ್ಳಬೇಕು ಅಂತ G20 ರಾಷ್ಟ್ರಗಳಿಗೆ ಚೀನಾ ಪ್ರಧಾನಿ ಲಿ ಕಿಯಾಂಗ್‌ ಕರೆ ಕೊಟ್ಟಿದ್ದಾರೆ. ನೆನ್ನೆ ನಡೆದ G20 ವರ್ಚುವಲ್‌ ಶೃಂಗಸಭೆಯಲ್ಲಿ ಚೀನಾ ಕಡೆಯಿಂದ ಷಿ ಜಿನ್‌ಪಿಂಗ್‌ ಬದಲು ಲಿ ಕಿಯಾಂಗ್‌ ಭಾಗಿಯಾಗಿದ್ರು. ಈ ವೇಳೆ ಲಿ ಅವ್ರು ಅಭಿವೃದ್ಧಿ ಸಹಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ಬೇಕು ಅಂತ ಹೇಳಿದ್ದಾರೆ. ಜೊತೆಗೆ ಅಭಿವೃದ್ಧಿಯನ್ನ ರಾಜಕೀಯಕರಣಗೊಳಿಸೋ ಬಗ್ಗೆ ವಿರೋಧಿಸಿದ್ದಾರೆ. ಇನ್ನು ಜಗತ್ತಿನ ಆರ್ಥಿಕತೆಯನ್ನ ರಿಕವರಿ ಮಾಡಲು ಮತ್ತು ಜಾಗತಿಕ ಅಭಿವೃದ್ಧಿಗಾಗಿ, ಚೀನಾ G20 ರಾಷ್ಟ್ರಗಳೊಂದಿಗೆ ಮುಕ್ತವಾಗಿ ಕೆಲಸ ಮಾಡೋದನ್ನ ಕಂಟಿನ್ಯೂ ಮಾಡುತ್ತೆ ಅಂತ ಹೇಳಿದ್ದಾರೆ. ಅಂದ್ಹಾಗೆ ನೆನ್ನೆ ನಡೆದ ಇಡೀ ವರ್ಚುವಲ್‌ ಸಭೆಯಲ್ಲಿ, G20 ನಾಯಕರ ಮಧ್ಯೆ ನಡೆದ ಚರ್ಚೆಯಲ್ಲಿ ಇಸ್ರೇಲ್‌-ಹಮಾಸ್‌ ಯುದ್ಧ ಪ್ರಮುಖ ವಿಷಯವಾಗಿತ್ತು. ಆದ್ರೆ ಚೀನಾ ಮಾತ್ರ ಇಸ್ರೇಲ್‌-ಹಮಾಸ್‌ ಯುದ್ಧದ ಕುರಿತು ಏನೂ ಮಾತಾಡಿಲ್ಲ.

-masthmagaa.com

Contact Us for Advertisement

Leave a Reply