ಜಿ20 ಸಭೆಗೆ ಜಿನ್‌ಪಿಂಗ್‌ ಗೈರು?

masthmagaa.com:

ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಗೈರಾಗುವ ಸಾಧ್ಯತೆಯಿದೆ ಅಂತ ತಿಳಿದು ಬಂದಿದೆ. ಈ ಸಭೆಯಲ್ಲಿ ಜಿನ್‌ಪಿಂಗ್‌ರ ಬದಲಾಗಿ ಚೀನಾದ ಪ್ರಧಾನಿ ಲಿ ಕಿಯಾಂಗ್‌ ಭಾಗವಹಿಸಬಹುದು ಅಂತ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಜಿನ್‌ಪಿಂಗ್‌ ಶೃಂಗಸಭೆಯಲ್ಲಿ ಭಾಗವಹಿಸೋದಿಲ್ಲ ಅನ್ನೋ ಮಾಹಿತಿ ಸಿಕ್ಕಿಲ್ಲ. ಜೊತೆಗೆ ಈ ಬಗ್ಗೆ ಚೀನಾ ಇನ್ನೂ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಇನ್ನು ಈಗಾಗಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ಜಿ20 ಸಭೆಗೆ ಬರೋದಾಗಿ ಅಧಿಕೃತವಾಗಿ ಅನೌನ್ಸ್‌ ಮಾಡಿದ್ದಾರೆ. ಚೀನಾ ಜೊತೆ ಸಂಬಂಧ ಸರಿಪಸಿಕೊಳ್ಳಲು ಟ್ರೈ ಮಾಡ್ತಿರುವ ಅಮೆರಿಕ, ಭಾರತ ಪ್ರವಾಸ ವೇಳೆ ಜಿನ್‌ಪಿಂಗ್‌ ಹಾಗೂ ಬೈಡನ್‌ ಪ್ರತ್ಯೇಕವಾಗಿ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಆದ್ರೆ ಈಗದಕ್ಕೆ ಬ್ರೇಕ್‌ ಬಿದ್ದ ಹಾಗಾಗಿದೆ. ಅಂದ್ಹಾಗೆ ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಅಷ್ಟೇನು ಚೆನ್ನಾಗಿಲ್ಲ. 2020ರಲ್ಲಿ ಲಡಾಖ್‌ನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಅದಾದ ಬಳಿಕ ಚೀನಾ ಹಾಗೂ ಭಾರತದ ನಡುವಿನ ಗಡಿ ಉದ್ವಿಗ್ನತೆ ಮುಂದುವರೆದಿದೆ. ಇನ್ನು ಮೊನ್ನೆಯಷ್ಟೆ ಭಾರತದ ಅರುಣಾಚಲ ಪ್ರದೇಶ ಹಾಗೂ ಅಕ್ಸಯ್‌ ಚಿನ್‌ನ್ನ ತಂದು ಅಂತ ಹೇಳಿಕೊಂಡು ಚೀನಾ ತನ್ನ ಮ್ಯಾಪ್‌ ರಿಲೀಸ್‌ ಮಾಡಿ ಕೆಣಕೊ ಕೆಲಸ ಮಾಡಿದೆ. ಇದಾದ ಎರಡೇ ದಿನಕ್ಕೆ ಜಿನ್‌ಪಿಂಗ್‌ ಜಿ20 ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರೋದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಅಂದ್ಹಾಗೆ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚೀನಾಗೆ ಭೇಟಿ ನೀಡಿದ್ರೆ, 2019ರಲ್ಲಿ ಜಿನ್‌ಪಿಂಗ್‌ ಭಾರತಕ್ಕೆ ಭೇಟಿ ನೀಡಿದ್ರು. ಅದಾದ ಬಳಿಕ ಉಭಯ ನಾಯಕರು ಜಾಗತಿಕ ವೇದಿಕೆಗಳಲ್ಲಿ ಭೇಟಿ ಮಾಡಿದ್ದು ಬಿಟ್ರೆ ಅಧಿಕೃತ ಪ್ರವಾಸ ಕೈಗೊಂಡಿಲ್ಲ.

-masthmagaa.com

Contact Us for Advertisement

Leave a Reply