ಮಾಲ್ಡೀವ್ಸ್‌ ದಡ ತಲುಪಿದ ಚೀನಾದ ಇನ್ನೊಂದು ʻರಿಸರ್ಚ್‌ ಶಿಪ್‌ʼ!

masthmagaa.com:

ಮಾಲ್ಡೀವ್ಸ್‌ ತನ್ನ ಚೀನಾ ವ್ಯಾಮೋಹವನ್ನ ಮತ್ತೆ ತೋರಿಸಿದೆ. ಇದೀಗ ಚೀನಾದ ಸೋ ಕಾಲ್ಡ್‌ ʻರಿಸರ್ಚ್‌ ಶಿಪ್‌ʼವೊಂದು ಮಾಲ್ಡೀವ್ಸ್‌ಗೆ ಬಂದು ನಿಂತಿದೆ. ಶಿಯಾಂಗ್ ಯಾಂಗ್‌ ಹಾಂಗ್‌ 03 ಅನ್ನೊ ಹೆಸರಿನ ಹಡಗು ಸದ್ಯ ಮಾಲ್ಡೀವ್ಸ್‌ನ ರಾಜಧಾನಿ ಮಾಲಿಗೆ ರೀಚ್‌ ಆಗಿದೆ. ಇನ್ನು ವಾರಗಟ್ಟಲೆ ಇದು ಈ ಭಾಗದಲ್ಲಿ ಸರ್ವೇ ನಡೆಸಲಿದೆ ಅಂತ ವರದಿಯಾಗಿದೆ. ಆದ್ರೆ ಮಾಲ್ಡೀವ್ಸ್‌ ಎಂದಿನಂತೆ ಈ ಹಡಗು ಯಾವುದೇ ರಿಸರ್ಚ್‌ ಮಾಡಲ್ಲ. ಕೇವಲ ಸಿಬ್ಬಂದಿಗಳ ರೊಟೇಷನ್‌ ಹಾಗೂ ಮೇಂಟೆನೆನ್ಸ್‌ಗೋಸ್ಕರ ಬಂದಿದೆ ಅಂತ ಹೇಳಿಕೆ ನೀಡಿದೆ. ಅಂದ್ಹಾಗೆ ಲಂಕಾ, ಮಾಲ್ಡೀವ್ಸ್‌ಗಳಿಗೆ ಈ ರೀತಿ ಚೀನಾ ಗೂಢಾಚಾರಿ ಹಡಗುಗಳು ಬಂದಿರೋದು ಹೊಸದೇನಲ್ಲ. ಲಂಕಾಗೆ ಚೀನಾ ಹಡಗು ಬಂದಾಗ ಭಾರತ ವಿರೋಧಿಸಿತ್ತು. ಯಾಕಂದ್ರೆ ಓಷನ್‌ ಸರ್ವೇ ಹೆಸರಲ್ಲಿ ಚೀನಾ ಮಾಡೋ ರಿಸರ್ಚ್‌ನ್ನ ದುರ್ಬಳಕೆ ಮಾಡಿಕೊಳ್ಳುತ್ತೆ ಅನ್ನೋದು ಭಾರತದ ವಾದ. ಚೀನಾ ಕೂಡ ಇಂಥಾ ಕುತಂತ್ರಿ ಕೆಲಸಗಳನ್ನ ಮಾಡೋದು ಹೊಸದೇನಲ್ಲ. ವೆಬ್‌ ಸೈಟ್‌ ಹ್ಯಾಕ್‌ ಮಾಡೋದು. ಸ್ಪೈ ಬಲೂನ್‌ ಹಾರಿಸೋದು, ಇಂಥಾ ಸ್ಪೈ ಹಡಗುಗಳನ್ನ ಕಳಿಸೋ ಕೆಲಸ ಮಾಡ್ತಾನೆ ಇರುತ್ತೆ. ಇಂಡೋ ಪೆಸಿಫಿಕ್‌ನಲ್ಲಿ ಮಾಲ್ಡೀವ್ಸ್‌ನಂತ ದೇಶಗಳನ್ನ ಹಾಕೊಂಡು ತನ್ನ ಕೆಲಸ ಸಾಧಿಸೋಕೆ ಚೀನಾ ಹೊಂಚು ಹಾಕ್ತಾನೆ ಇರುತ್ತೆ.

-masthmagaa.com

Contact Us for Advertisement

Leave a Reply