SCO ಸಭೆ: ಭಾರತಕ್ಕೆ ಬರಲಿದ್ದಾರೆ ಚೀನಾ ಹಾಗೂ ರಷ್ಯಾ ರಕ್ಷಣಾ ಸಚಿವರು

masthmagaa.com:

ಭಾರತದಲ್ಲಿ ನಡೆಯಲಿರುವ ಶಾಂಘೈ ಕೋಆಪರೇಶನ್‌ ಒಕ್ಕೂಟ (SCO)ನ ಶೃಂಗಸಭೆಯ ಭಾಗವಾಗಿ ದೇಶದ ಹಲವು ಭಾಗಗಳಲ್ಲಿ ಪೂರ್ವಸಭೆಗಳನ್ನ ನಡೆಸಲಾಗ್ತಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್‌ 27 ಹಾಗೂ 28 ರಂದು ದೆಹಲಿಯಲ್ಲಿ ನಡೆಯಲಿರುವ ರಕ್ಷಣಾ ಸಚಿವರ ಸಭೆಗೆ ಚೀನಾ ಹಾಗೂ ರಷ್ಯಾದ ರಕ್ಷಣಾ ಸಚಿವರು ಭಾಗವಹಿಸಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಯುಕ್ರೇನ್‌ ಮೇಲೆ ದಾಳಿ ಮಾಡಿದ ನಂತ್ರ ಇದೇ ಮೊದಲ ಬಾರಿಗೆ ರಷ್ಯಾದ ರಕ್ಷಣಾ ಸಚಿವ ಸೆರ್ಗಿ ಶೊಯ್ಗು ಅವ್ರು ಭಾರತಕ್ಕೆ ಬರಲಿದ್ದಾರೆ. ಜೊತೆಗೆ ಚೀನಾದ ರಕ್ಷಣಾ ಸಚಿವ ಲಿ ಶಂಗ್ಫೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಅಂತ ತಿಳಿದು ಬಂದಿದೆ. ಇದೇ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜೊತೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಇತ್ತೀಚೆಗಷ್ಟೆ ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ ಬುಟ್ಟೊ ಜರ್ದಾರಿ ಭಾಗವಹಿಸಲಿದ್ದಾರೆ ಅಂತ ಪಾಕ್‌ ಅನೌನ್ಸ್‌ ಮಾಡಿತ್ತು. ಅಂದ್ಹಾಗೆ SCO ಶೃಂಗಸಭೆ ಜುಲೈನಲ್ಲಿ ನಡೆಯಲಿದೆ. ಈ ಗುಂಪಿಗೆ 2017ರಲ್ಲಿ ಸೇರ್ಪಡೆಯಾದ ನಂತ್ರ ಇದೇ ಮೊದಲ ಭಾರಿಗೆ ಭಾರತ ಈ ಶೃಂಗಸಭೆಯ ಆತಿಥ್ಯ ವಹಿಸಿಕೊಂಡಿದೆ.

-masthmagaa.com

Contact Us for Advertisement

Leave a Reply