ತಂದೆ, ತಾಯಿ ಮತ್ತು ಮಕ್ಕಳ ಬಗ್ಗೆ ಪೋಪ್​ ಫ್ರಾನ್ಸಿಸ್ ಹೇಳಿದ್ದೇನು?

masthmagaa.com:

ತಂದೆ-ತಾಯಿ ಮತ್ತು ಮಕ್ಕಳ ಬಗ್ಗೆ ಕ್ಯಾಥೋಲಿಕ್ ಧರ್ಮಗುರು ಪೋಪ್​ ಫ್ರಾನ್ಸಿಸ್ ವಿಚಿತ್ರ ಹೇಳಿಕೆಯೊಂದನ್ನು ನೀಡಿದ್ದಾರೆ. ವ್ಯಾಟಿಕನ್ ಸಿಟಿಯಲ್ಲಿ ಮಾತಾಡಿದ ಅವರು, ಇತ್ತೀಚೆಗೆ ಜನರು ಮಕ್ಕಳನ್ನು ಹೊಂದಲು ಬಯಸುತ್ತಿಲ್ಲ. ಮಕ್ಕಳನ್ನು ಮಾಡಿಕೊಳ್ಳುವ ಬದಲಿಗೆ ನಾಯಿ, ಬೆಕ್ಕಿನಂತ ಸಾಕು ಪ್ರಾಣಿಗಳನ್ನು ಸಾಕಲು ಇಷ್ಟಪಡ್ತಿದ್ದಾರೆ. ಒಂದು ರೀತಿಯ ಸ್ವಾರ್ಥ ಮನೋಭಾವನೆ ಬೆಳೆಯುತ್ತಿರೋದನ್ನು ನಾವು ನೋಡ್ಬೋದು ಅಂತ ಹೇಳಿದ್ದಾರೆ. ಜೊತೆಗೆ ಕೆಲವರು ಒಂದು ಮಗುವನ್ನು ಮಾತ್ರ ಹೊಂದುತ್ತಾರೆ. ನಂತರ ನಾಯಿ, ಬೆಕ್ಕುಗಳನ್ನು ಸಾಕ್ತಾರೆ. ಈ ನಾಯಿ ಬೆಕ್ಕುಗಳೇ ಮಕ್ಕಳ ಸ್ಥಾನ ಪಡ್ಕೊಳ್ತವೆ. ಇದನ್ನ ಕೇಳಿದ್ರೆ ನಗು ಬರುತ್ತೆ. ಆದ್ರೆ ಇದು ರಿಯಾಲಿಟಿ ಅಂತ ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ಮಾತೃತ್ವ, ಪಿತೃತ್ವವನ್ನು ನಿರಾಕರಿಸೋ ಅಭ್ಯಾಸ ನಮ್ಮನ್ನು ಕುಗ್ಗಿಸುತ್ತವೆ. ನಮ್ಮ ಮಾನವೀಯತೆಯನ್ನು ಕುಗ್ಗಿಸುತ್ತವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply