ಚಂದ್ರು ಕೊಲೆ: ಗೃಹ ಸಚಿವರ ತಪ್ಪು ಹೇಳಿಕೆ! ವಿಪಕ್ಷಗಳು ತರಾಟೆ!

masthmagaa.com:

ಬೆಂಗಳೂರಿನ ಜೆಜೆ ನಗರದಲ್ಲಿ ನಡೆದ ಹಿಂದೂ ಯುವಕ ಚಂದ್ರು ಎಂಬಾತನ ಹತ್ಯೆಯಾಗಿದೆ. ಆದ್ರೆ ಈ ಹತ್ಯೆ ಸಂಬಂಧ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿದ ಹೇಳಿಕೆ ಸಾಕಷ್ಟು ಗೊಂದಲ ಮತ್ತು ವಿವಾದಕ್ಕೆ ಕಾರಣವಾಗಿದೆ. ಆರಂಭದಲ್ಲಿ ಗೃಹ ಸಚಿವರು, ಚಂದ್ರುಗೆ ಉರ್ದು ಮಾತಾಡೋಕೆ ಬಂದಿಲ್ಲ ಅನ್ನೋ ಕಾರಣಕ್ಕೆ ಕೆಲವರು ಚೂರಿಯಿಂದ ಚುಚ್ಚಿ ಚುಚ್ಚಿ ಕೊಂದ್ರು. ಅವನೊಬ್ಬ ದಲಿತ ಯುವಕ. ಬಹಳ ಅಮಾನುಷವಾಗಿ ಕೊಂದಿದ್ದಾರೆ. ಕೆಲವರನ್ನ ಪೊಲೀಸರು ಅರೆಸ್ಟ್​ ಮಾಡಿದ್ದಾರೆ ಅಂದ್ರು. ಅದಾದ ಬಳಿಕ ನಾನು ಹೇಳಿದ್ದು ತಪ್ಪಾಗಿದೆ, ಉರ್ದು ಮಾತನಾಡಿಲ್ಲ ಅಂತ ಕೊಲೆಯಾಗಿದೆ ಅಂತ ನಂಗೆ ಕೆಲ ಮೂಲಗಳಿಂದ ವರದಿ ಬಂದಿತ್ತು. ಅದೀಗ ತಪ್ಪು ಅಂತ ಗೊತ್ತಾಗಿದೆ. ವಿಸ್ತೃತ ವರದಿ ಪ್ರಕಾರ, ಎರಡು ಬೈಕ್​ಗಳ ಮಧ್ಯೆ ಡಿಕ್ಕಿಯಾಗಿದೆ. ಆಗ ವಾಗ್ವಾದ ನಡೆದು ಒಬ್ಬ ಚಂದ್ರು ತೊಡೆಗೆ ಚೂರಿ ಇರಿದಿದ್ದಾನೆ. ಚಂದ್ರುನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗೋವಷ್ಟರಲ್ಲಿ ಆತ ಪ್ರಾಣ ಕಳ್ಕೊಂಡಿದ್ದಾನೆ ಎಂದಿದ್ದಾರೆ. ಆರಂಭದಲ್ಲಿ ಒಂದುಥರ, ಬಳಿಕ ಮತ್ತೊಂದುಥರ ಹೇಳಿಕೆ ಕೊಟ್ಟ ಗೃಹ ಸಚಿವರ ವಿರುದ್ಧ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂಥವರು ಹೋಂ ಮಿನಿಸ್ಟರ್ ಆಗೋಕೆ ನಾಲಾಯಕ್​ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅರಗ ಜ್ಞಾನೇಂದ್ರ ಕಾಮಿಡಿ ರೋಲ್​ ಮಾಡಕ್ಕೆ ಬಂದಿದ್ದಾರಾ, ವಿಲನ್​ ರೋಲ್​ ಮಾಡಕ್ಕೆ ಬಂದಿದ್ದಾರಾ ಅಂತ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಸಿಎಂ ಇಬ್ರಾಹಿಂ ಮಾತನಾಡಿ, ಮಂಗನಿಗೆ ಹೆಂಡ ಕುಡಿಸಿ ಕುಣಿ ಅಂದ್ರೆ ಮಂಗ ಏನು ಮಾಡುತ್ತೋ ಆಥರ ಮಾಡ್ತಿದೆ ಬಿಜೆಪಿ ಎಂದಿದ್ದಾರೆ. ಇನ್ನು ಚಂದ್ರು ಕುಟುಂಬಕ್ಕೆ ಬಿಜೆಪಿ 5 ಲಕ್ಷ ರೂಪಾಯಿಯ ಪರಿಹಾರದ ಚೆಕ್​ ವಿತರಿಸಿದೆ. ಈ ವೇಳೆ ಮಾತನಾಡಿದ ಸಿಟಿ ರವಿ ಚಂದ್ರುನ ಅಣ್ಣ ಬಿಜೆಪಿ ಬೂತ್ ಕಮಿಟಿಯ ಸೆಕ್ರೆಟರಿ ಎಂದಿದ್ದಾರೆ.

-masthmagaa.com

Contact Us for Advertisement

Leave a Reply