ಮಾರ್ಚ್‌ನಲ್ಲಿ CAA ನಿಯಮಗಳು ಜಾರಿ: NRC, NPR ಸ್ಥಾಪನೆ

masthmagaa.com:

ಪೌರತ್ವ ತಿದ್ದುಪಡಿ ಕಾಯ್ದೆ ಅಥ್ವಾ CAAನಿಂದ ರೂಪಿಸಲಾದ ಹೊಸ ನಿಯಮಗಳು ಮುಂದಿನ ತಿಂಗಳು ಅಂದ್ರೆ ಮಾರ್ಚ್‌ನಿಂದ ಜಾರಿಗೆ ಬರಲಿವೆ ಅಂತ ತಿಳಿದು ಬಂದಿದೆ. ಪಾಕಿಸ್ತಾನ, ಬಾಂಗ್ಲಾ, ಆಫ್ಘನ್‌ನಿಂದ ಬರೋ ಮುಸ್ಲೀಮೇತರ ನಿರಾಶ್ರಿತರಿಗೆ ಪೌರತ್ವ ಕೊಡೋ ಈ ಬಿಲ್‌ ಸಕತ್‌ ಸದ್ದು ಮಾಡಿತ್ತು. ಇದೀಗ ಎಲೆಕ್ಷನ್‌ಗೂ ಮುನ್ನ ಇದರ ರೂಲ್ಸ್‌ ಜಾರಿಗೆ ಬರೋದು ಕನ್ಫರ್ಮ್‌ ಎನ್ನಲಾಗ್ತಿದೆ. ಇದ್ರಿಂದ ನ್ಯಾಷನಲ್‌ ಪಾಪುಲೇಶನ್‌ ರಿಜಿಸ್ಟರ್(‌NPR) ಹಾಗೂ ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಸಿಟಿಜನ್ಸ್‌(NRC)ಗಳು ಕೂಡ ಸ್ಥಾಪನೆ ಆಗಲಿವೆ.

-masthmagaa.com

Contact Us for Advertisement

Leave a Reply