ಪಾಕಿಸ್ತಾನ ಹೊಸ ಮಾಧ್ಯಮ ಕಾನೂನು: ಪತ್ರಕರ್ತನಿಂದ ತೀವ್ರ ವಿರೋಧ

-Amar Prasad
@amarprasad_ap

ಇನ್ನು ಪಾಕಿಸ್ತಾನದಲ್ಲಿ ಹೊಸ ಮಾಧ್ಯಮ ಕಾನೂನನ್ನ ತಂದಿದೆ ಇಮ್ರಾನ್ ಖಾನ್ ಸರ್ಕಾರ. ಪಾಕಿಸ್ತಾನ ಮಿಡಿಯಾ ಡೆವಲಪ್ ಮೆಂಟ್ ಅಥಾರಿಟಿ ಕಾಯ್ದೆಯನ್ನ ಸುಗ್ರೀವಾಜ್ಞೆ ತಂದು ಜಾರಿ ಮಾಡಲಾಗಿದೆ. ಆದ್ರೆ ಇದಕ್ಕೆ ಪಾಕಿಸ್ತಾನ ಫೆಡರಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ, ಪಾಕಿಸ್ತಾನ ವಕೀಲರ ಸಂಘ ಸೇರಿ ಎಲ್ಲಡೆಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದು ಪಾಕಿಸ್ತಾನದಲ್ಲಿ ಉಳಿದಿರೋ ಅಲ್ಪಸ್ವಲ್ಪ ಮಾಧ್ಯಮ ಸ್ವಾತಂತ್ರವನ್ನೂ ಹತ್ತಿಕ್ಕಿ, ಎಲ್ಲವನ್ನೂ ಸಂಪೂರ್ಣ ಸರ್ಕಾರದ ಕಂಟ್ರೋ್ಗೆ ತಗೊಳೋ ಪ್ರಯತ್ನ ಅಂತ ಟೀಕಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply