ಮುಂದಿನ CJI ಆಗಿ ಇವರ ಹೆಸರನ್ನ ಶಿಫಾರಸು ಮಾಡಿದ ಬೊಬ್ಡೆ!

masthmagaa.com:

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳಾದ ಎಸ್​.ಎ. ಬೊಬ್ಡೆ ಮುಂದಿನ ಸಿಜೆಐ ಸ್ಥಾನಕ್ಕೆ ನ್ಯಾಯಮೂರ್ತಿ ಎನ್​.ವಿ. ರಮಣ ಅವರ ಹೆಸರನ್ನ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸುಪ್ರೀಂಕೋರ್ಟ್​ನ ಜಡ್ಜ್​ಗಳಲ್ಲಿ ಎನ್​.ವಿ. ರಮಣ ಅವರು ತುಂಬಾ ಹಿರಿಯ ಜಡ್ಜ್ ಆಗಿದ್ದಾರೆ. ಹೀಗಾಗಿ ಅವರ ಹೆಸನರನ್ನೇ ಶಿಫಾರಸು ಮಾಡಿದ್ದಾರೆ.
ಹಾಲಿ ಸಿಜೆಐ ಎಸ್​.ಎ. ಬೊಬ್ಡೆ ಏಪ್ರಿಲ್​ 23ರಂದು ನಿವೃತ್ತಿ ಹೊಂದುತ್ತಿದ್ದಾರೆ. ಇವರು 2019ರ ನವೆಂಬರ್​ನಲ್ಲಿ 47ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದ್ರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ತೀರ್ಪುಗಳನ್ನ ನೀಡಿದ್ದಾರೆ ಎಸ್​.ಎ. ಬೊಬ್ಡೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ವರ್ಷ. ಏಪ್ರಿಲ್​ 24ನೇ ತಾರೀಖು ಬೊಬ್ಡೆ ಅವರಿಗೆ 65 ವರ್ಷ ಆಗುತ್ತೆ.

ಅಂದ್ಹಾಗೆ ಸಿಜೆಐ ಅವರನ್ನ ನೇಮಿಸುವ ಮಾನದಂಡ ಮತ್ತು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ಭಾರತದ ಸಂವಿಧಾನದಲ್ಲಿ ಏನೂ ಉಲ್ಲೇಖವಿಲ್ಲ. ಸಾಮಾನ್ಯವಾಗಿ ಕಾನೂನು ಸಚಿವಾಲಯವು ಮುಂದಿನ ಸಿಜೆಐಗೆ ಹೆಸರು ಸೂಚಿಸುವಂತೆ ನಿರ್ಗಮಿತ ಸಿಜೆಐ ಬಳಿ ಕೇಳುತ್ತೆ. ಅದರಂತೆ ಸುಪ್ರೀಂಕೋರ್ಟ್​ನಲ್ಲಿರೋ ಹಿರಿಯ ನ್ಯಾಯಮೂರ್ತಿಗಳ ಹೆಸರನ್ನ ಸೂಚಿಸುತ್ತಾರೆ. ಈ ವೇಳೆ ಹೆಸರನ್ನ ಸೂಚಿಸಲು ನಿರ್ಗಮಿತ ಸಿಜೆಐ ಬೇಕಿದ್ರೆ ಕೊಲಿಜಿಯಂನ ನೆರವು ಪಡೆಯಬಹುದು. ಬಳಿಕ ಕಾನೂನು ಸಚಿವರು ಪ್ರಧಾನಿಗೆ ಹೆಸರನ್ನ ಕಳಿಸುತ್ತಾರೆ. ಪ್ರಧಾನಿಯಿಂದ ರಾಷ್ಟ್ರಪತಿಗೆ ಹೊಗುತ್ತೆ. ರಾಷ್ಟ್ರಪತಿಗಳು ಸಿಜೆಐಗೆ ಪ್ರಮಾಣವಚನ ಬೋಧಿಸುತ್ತಾರೆ.

-masthmagaa.com

Contact Us for Advertisement

Leave a Reply