ಮಕ್ಕಳೇ ರೆಡಿಯಾಗಿ.. ಫೆಬ್ರವರಿ 1ರಿಂದ 9ನೇ ತರಗತಿ, ಪ್ರಥಮ ಪಿಯು ಆರಂಭ

masthmagaa.com:

ರಾಜ್ಯದಲ್ಲಿ ಫೆಬ್ರವರಿ 1ರಿಂದ ಅಂದ್ರೆ ಸೋಮವಾರದಿಂದ 9ನೇ ತರಗತಿ ಮತ್ತು ಪ್ರಥಮ ಪಿಯು ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ ಅಂತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್​ ಕುಮಾರ್ ಹೇಳಿದ್ದಾರೆ. ಇದಕ್ಕೆ ತಾಂತ್ರಿಕ ಸಲಹಾ ಸಮಿತಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಫೆಬ್ರವರಿ ಎರಡನೇ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಉಳಿದ ತರಗತಿಗಳನ್ನ ತೆರೆಯೋ ಬಗ್ಗೆ ತೀರ್ಮಾನ ಕೈಗೊಳ್ತೀವಿ. ಸದ್ಯ 6, 7 ಮತ್ತು 8ನೇ ತರಗತಿ ಮಕ್ಕಳಿಗೆ ವಿದ್ಯಾಗಮ ವ್ಯವಸ್ಥೆ ಮುಂದುವರಿಯಲಿದೆ. ರಾಜ್ಯದಲ್ಲಿ ಜನವರಿ 1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯು ತರಗತಿಗಳು ಆರಂಭವಾಗಿದ್ದವು. ಇದೀಗ ಫೆಬ್ರವರಿ 1ರಿಂದ 9 ಮತ್ತು ಪ್ರಥಮ ಪಿಯು ತರಗತಿಗಳನ್ನ ಪೂರ್ಣ ಪ್ರಮಾಣದಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ಖಾಸಗಿ ಶಾಲೆಯ ಶುಲ್ಕ ನಿಗದಿ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿ ಎರಡು ದಿನದಲ್ಲಿ ತೀರ್ಮಾನ ಪ್ರಕಟಿಸ್ತೀವಿ. ಪೋಷಕರ ಪರಿಸ್ಥಿತಿ ಬಗ್ಗೆ ನಮಗೆ ಅರಿವಿದೆ. ಅಟ್​ ದಿ ಸೇಮ್ ಟೈಂ ಖಾಸಗಿ ಶಾಲಾ ಶಿಕ್ಷಕರು ಕೆಲಸ ಕಳೆದುಕೊಂಡಿದ್ದು, ಅರ್ಧ ಸಂಬಳಕ್ಕೆ ಕೆಲಸ ಮಾಡ್ತಿರೋದು ಕೂಡ ಗೊತ್ತಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ತಿರ್ಮಾನ ಕೈಗೊಳ್ತೀವಿ. ಆನ್​ಲೈನ್​ ಕ್ಲಾಸ್​ಗಳನ್ನ ಸ್ಥಗಿತಗೊಳಿಸಿದ್ರೆ ಬಿಇಒಗಳಿಗೆ ದೂರು ನೀಡಿ ಅಂತ ಸಚಿವ ಸುರೇಶ್ ಕುಮಾರ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply