ರಷ್ಯಾ-ಯುಕ್ರೇನ್ ಸಂಘರ್ಷ: ಗಡಿಯಲ್ಲಿ ಸೇನೆ ನಿಯೋಜನೆ: ಬ್ರಿಟನ್

masthmagaa.com:

ರಷ್ಯಾ-ಯುಕ್ರೇನ್ ಸಂಘರ್ಷ ಹೆಚ್ಚುತ್ತಿರುವ ಹೊತ್ತಲ್ಲೇ ರಷ್ಯಾಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಕಠಿಣ ಸಂದೇಶ ರವಾನಿಸಿದ್ದಾರೆ. ಪೂರ್ವ ಯೂರೋಪ್​​ನ ದೇಶಗಳಲ್ಲಿ ತನ್ನ ಸೇನೆ ನಿಯೋಜನೆಯನ್ನು ಹೆಚ್ಚಿಸಲು ಬ್ರಿಟನ್ ನಿರ್ಧರಿಸಿದೆ. ಈಗಾಗಲೇ ಯೂರೋಪ್​​ನ ಪೂರ್ವ ಭಾಗದ ದೇಶಗಳಲ್ಲಿ 1150 ಬ್ರಿಟನ್ ಯೋಧರು ನಿಯೋಜನೆಗೊಂಡಿದ್ದು, ಅವರ ಸಂಖ್ಯೆಯನ್ನು ಡಬಲ್ ಮಾಡಲು, ಶಸ್ತ್ರಾಸ್ತ್ರ, ಯುದ್ಧನೌಕೆ, ಜೆಟ್​​ಗಳನ್ನು ಕಳುಹಿಸಲು ಪ್ಲಾನ್ ಮಾಡಲಾಗಿದೆ. ಜೊತೆಗೆ ಪೂರ್ವ ಯೂರೋಪ್ ದೇಶವಾದ ಎಸ್ಟೋನಿಯಾಗೆ ರಕ್ಷಣಾತ್ಮಕ ಶಸ್ತ್ರಾಸ್ತ್ರ ಕಳುಹಿಸೋದಾಗಿಯೂ ಬ್ರಿಟನ್ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬೋರಿಸ್ ಜಾನ್ಸನ್​​, ನಾವು ಈಗಾಗಲೇ ಮುಂದಿನ ವಾರ ಪೂರ್ವ ಯೂರೋಪ್​​ನಲ್ಲಿ ಸೇನೆ ನಿಯೋಜನೆಗೆ ರೆಡಿ ಇರುವಂತೆ ಸೇನೆಗೆ ಸೂಚಿಸಿದ್ದೀವಿ. ಈ ಮೂಲಕ ನಾವು ರಷ್ಯಾದ ಪ್ರಾದೇಶಿಕ ಅಸ್ಥಿರತೆ ಸೃಷ್ಟಿಯೋ ಪ್ರಯತ್ನವನ್ನು ಸಹಿಸೋದಿಲ್ಲ ಅನ್ನೋ ಸಂದೇಶ ರವಾನಿಸಿದ್ದೀವಿ ಅಂತ ಹೇಳಿದ್ದಾರೆ. ಅಂದಹಾಗೆ ಬೋರಿಸ್ ಜಾನ್ಸನ್ ಮುಂದಿನ ವಾರ ಈ ಯುಕ್ರೇನ್​​ಗೆ ಭೇಟಿ ನೀಡಲಿದ್ದು, ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೂ ಚರ್ಚಿಸಲಿದ್ದಾರೆ.

ಇನ್ನು ಈ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿರೋ ನ್ಯಾಟೋ ಸೆಕ್ರೆಟರಿ ಜೆನೆರಲ್ ಜೆನ್ಸ್​ ಸ್ಟೋಲ್ಟನ್​​ಬರ್ಗ್​​​, ರಷ್ಯಾ ದಾಳಿ ನಡೆಸಿದ್ರೆ ನ್ಯಾಟೋ ಮೆಂಬರ್ ಅಲ್ಲದ ಯುಕ್ರೇನ್​​​​​​ನಲ್ಲಿ ಸೇನೆ ನಿಯೋಜಿಸುವ ಯಾವುದೇ ಆಲೋಚನೆ ನ್ಯಾಟೋ ಮುಂದೆ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply