₹915 ಕೋಟಿ ಗಳಿಸಿದ ಇಂಫೋಸಿಸ್‌ ನಾರಾಯಣ ಮೂರ್ತಿ ದಂಪತಿ!

masthmagaa.com:

ಇ-ಕಾಮರ್ಸ್‌ ಕಂಪನಿ ಕ್ಲೌಡ್‌ಟೇಲ್‌ ಶೇರುಗಳನ್ನ ಮಾರೋ ಮೂಲಕ ಇಂಫೋಸಿಸ್‌ ದಂಪತಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ₹915 ಕೋಟಿ ಗಳಿಸಿದ್ದಾರೆ. ಕ್ಲೌಡ್‌ಟೇಲ್‌, ಅಮೇಜಾನ್‌ ಮತ್ತು ಇಂಫೋಸಿಸ್‌ ನಡುವಿನ ಜಾಯಿಂಟ್‌ ವೆಂಚರ್‌ ಆಗಿತ್ತು. ಅಮೇಜಾನ್‌ಗೆ ಆರಂಭದಲ್ಲಿ ಮರ್ಚಂಟ್‌ಗಳನ್ನ ಟ್ರೈನ್‌ ಮಾಡಿ ಆನ್‌ಬೊರ್ಡ್‌ ಮಾಡ್ಕೊಳೋದು ಇದ್ರ ಕೆಲಸ ಆಗಿತ್ತು. ಇಂಫೋಸಿಸ್‌ನ ಹೂಡಿಕೆ ಅಂಗ ಕ್ಯಾಟರ್‌ಮನ್‌ 8 ವರ್ಷದ ಹಿಂದೆ ಕ್ಲೌಡ್‌ಟೇಲ್‌ನಲ್ಲಿ ಹೂಡಿಕೆ ಮಾಡಿತ್ತು. ಇದ್ರಲ್ಲಿ ಮೂರ್ತಿ ದಂಪತಿ ಕೂಡ ಖುದ್ದಾಗಿ ₹417 ಕೋಟಿ ಮೌಲ್ಯದ ಶೇರು ಖರೀದಿಸಿದ್ರು. ಈಗ ಕ್ಯಾಟರ್‌ಮನ್‌ ತನ್ನ ಶೇರುಗಳಲ್ಲಿ 76%ನ್ನ ₹1,332 ಕೋಟಿಗೆ ಮಾರಿದೆ. ಇದ್ರಿಂದ ಮೂರ್ತಿ ದಂಪತಿಗಳಿಗೆ ₹915 ಕೋಟಿ ಅಂದ್ರೆ ಮೂರು ಪಟ್ಟು ಲಾಭ ಆಗಿದೆ.

-masthmagaa.com

Contact Us for Advertisement

Leave a Reply