ವಿಶ್ವ ನಾಯಕರು ಉಳಿದುಕೊಂಡಿದ್ದ ಹೋಟೆಲ್‌ಗಳ ಹೆಸರುಗಳಿಗೆ ಕೋರ್ಡ್‌ವರ್ಡ್‌ ಬಳಕೆ! ಯಾಕೆ?

masthmagaa.com:

ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಆಗಮಿಸಿದ್ದ ಜಾಗತಿಕ ನಾಯಕರಿಗೆ ಭಾರಿ ಭದ್ರತೆ ಒದಗಿಸಲಾಗಿತ್ತು. ಇದೀಗ ಪೊಲೀಸರು ವಿಶ್ವ ನಾಯಕರು ಉಳಿದುಕೊಂಡಿದ್ದ ಹೋಟೆಲ್‌ಗಳ ಹೆಸರುಗಳನ್ನ ಕೋಡ್‌ವರ್ಡ್‌ಗಳ ಮೂಲಕ ಬಳಸುತ್ತಿದ್ದರು ಅಂತ ತಿಳಿದು ಬಂದಿದೆ. ಭದ್ರತಾ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವ್ರು ತಂಗಿದ್ದ ಮೌರ್ಯ ಶೆರಾಟನ್‌ ಹೋಟೆಲ್‌ಗೆ ʻಪಂಡೋರಾʼ ಅನ್ನೋ ಕೋರ್ಡ್‌ವರ್ಡ್‌ ಕೊಡಲಾಗಿತ್ತು. ಅದೇ ರೀತಿ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮತ್ತು ಅವರ ಪತ್ನಿ ಅಕ್ಷತಾ ತಂಗಿದ್ದ ಶಾಂಗ್ರೀಲಾ ಹೋಟೆಲ್‌ಗೆ ʻಸಮಾರಾʼ ಎಂದು ಕರೆಯಲಾಗಿತ್ತು. ನೈಜೀರಿಯಾ, ನೆದರ್‌ಲ್ಯಾಂಡ್ಸ್, ಸ್ಪೇನ್ ಮತ್ತು ಮಾರಿಷಸ್‌ನ ನಾಯಕರು, ವಿಶ್ವ ಬ್ಯಾಂಕ್‌ ಅಧಿಕಾರಿಗಳು ತಂಗಿದ್ದ ಲಿ ಮೆರಿಡಿಯನ್ ಹೋಟೆಲ್‌ಗೆ ʻಮಹಾಬೋಧಿʼ ಎಂದು, ಯುಎಇ ಅಧ್ಯಕ್ಷರು ತಂಗಿದ್ದ ತಾಜ್‌ ಮ್ಯಾನ್‌ ಸಿಂಗ್ ಹೋಟೆಲ್‌ಗೆ ʻಪ್ಯಾರಾಮೌಂಟ್‌ʼ ಎಂಬ ಕೋಡ್‌ ವರ್ಡ್‌ ನೀಡಲಾಗಿತ್ತು. ಅಂದ್ಹಾಗೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಅಥವಾ ವಿದೇಶಿ ಗಣ್ಯರು ಪ್ರಯಾಣಿಸುತ್ತಿರುವಾಗ ಅವರ ಭದ್ರತೆಗೆ ನಿಯೋಜಿಸಿದ ವಿವಿಧ ತಂಡಗಳು ತಮ್ಮ ರೇಡಿಯೋ ಸಂವಹನದಲ್ಲಿ ಗಣ್ಯರ ಹೆಸರು ಹಾಗೂ ಎಲ್ಲಿಗೆ ಹೋಗುತ್ತಿದ್ದಾರೆ ಅನ್ನೋದನ್ನ ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿರಲಿಲ್ಲ. ಅದರ ಬದಲಾಗಿ ಬೇರೆ ಕೋಡ್‌ ವರ್ಡ್‌ಗಳನ್ನು ಬಳಸಿದ್ದಾರೆ ಅಂತ ತಿಳಿದು ಬಂದಿದೆ.

 

-masthmagaa.com

Contact Us for Advertisement

Leave a Reply