ಚೀನಾ ಜೊತೆಗಿನ ಸಂಘರ್ಷ ಭಾರತ ಪರ ಅಮೆರಿಕ ಹೇಳಿಕೆ

masthmagaa.com:

ಭಾರತವು ಗಮನಾರ್ಹ ಭೌಗೋಳಿಕ-ರಾಜಕೀಯ ಸವಾಲುಗಳನ್ನ ಎದುರಿಸುತ್ತಿದೆ, ಅದರಲ್ಲೂ ವಿಶೇಷವಾಗಿ ಚೀನಾ ಮತ್ತು ಲೈನ್‌ ಆಫ್‌ ಆಕ್ಚುವಲ್‌ ಕಂಟ್ರೋಲ್‌ ಬಳಿ ಅದು ತೋರುತ್ತಿರುವ ನಡವಳಿಕೆಯಿಂದ ಅಂತ ಅಮೆರಿಕ ಹೇಳಿದೆ. ವೈಟ್​ ಹೌಸ್​ ಪ್ರಕಟಿಸಿದ ಇಂಡೋ-ಪೆಸಿಫಿಕ್‌ ಸ್ಟ್ರಾಟಜಿಕ್​ ರಿಪೋರ್ಟ್​ನಲ್ಲಿ ಈರೀತಿ ಹೇಳಿದೆ. ಆಸ್ಟ್ರೇಲಿಯಾದಲ್ಲಿ ಕ್ವಾಡ್‌ ವಿದೇಶಾಂಗ ಸಚಿವರ ಸಭೆ ನಡೆಯುತ್ತಿರುವ ಬೆನ್ನಲ್ಲೇ ಈ ವರದಿ ಬಿಡುಗಡೆಯಾಗಿದೆ. ಇದು ಬೈಡೆನ್​ ಸರ್ಕಾರ, ಇಂಡೋ-ಫೆಸಿಫಿಕ್ ಭಾಗದಲ್ಲಿ ಚೀನಾ ಪ್ರಭಾವ ಕಮ್ಮಿ ಮಾಡೋದು, ಭಾರತದ ಪ್ರಾದೇಶಿಕ ನಾಯಕತ್ವನ್ನ ಬೆಂಬಲಿಸೋ ಸಂದೇಶ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply