ಹಾಸ್ಯನಟಿ ಮನೆಯಲ್ಲಿ ಡ್ರಗ್ಸ್​​..! ವಶಕ್ಕೆ ಪಡೆದ ಎನ್​ಸಿಬಿ..!

masthmagaa.com:

ಬಾಲಿವುಡ್ ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಅವರ ಪತಿ ಹರ್ಷ್​ ಲಿಂಬಾಚಿಯಾ ಅವರನ್ನು ಮಾದಕವಸ್ತು ನಿಯಂತ್ರಣ ವಿಭಾಗ (ಎನ್​​ಸಿಬಿ) ವಿಚಾರಣೆಗೆ ಕರೆದೊಯ್ದಿದೆ. ಇಂದು ಬೆಳಗ್ಗೆ ಭಾರ್ತಿಯವರ ಮನೆಯಲ್ಲಿ ಎನ್​ಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಈ ವೇಳೆ ಸಣ್ಣ ಪ್ರಮಾಣದಲ್ಲಿ ಕೆನಬಿಸ್ ಅನ್ನೋ ಮಾದಕ ವಸ್ತು ಪತ್ತೆಯಾಗಿತ್ತು.

ಎನ್​​ಸಿಬಿ ಅಧಿಕಾರಿಗಳು ಕರೆದೊಯ್ಯುವಾಗ ಪ್ರತಿಕ್ರಿಯಿಸಿದ ಭಾರ್ತಿ, ಕೆಲವೊಂದು ವಿಚಾರಗಳ ಕುರಿತು ಪ್ರಶ್ನೆಗಳನ್ನು ಕೇಳಲು ನಮ್ಮನ್ನು ಕರೆದಿದ್ದಾರೆ ಅಷ್ಟೆ ಅಂತ ಹೇಳಿದ್ದಾರೆ. ಮನೆಯಲ್ಲಿ ಮಾದಕ ವಸ್ತು ಪತ್ತೆಯಾಗಿದ್ದರಿಂದ ಭಾರ್ತಿ ಸಿಂಗ್ ಮತ್ತವರ ಪತಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಡ್ರಗ್ ಪೆಡ್ಲರ್ ಓರ್ವನ ವಿಚಾರಣೆ ವೇಳೆ ಭಾರ್ತಿ ಸಿಂಗ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ಇಂದು ಎನ್​ಸಿಬಿ ಅಧಿಕಾರಿಗಳು ಭಾರ್ತಿ ಮನೆ ಮೇಲೆ ದಾಳಿ ನಡೆಸಿದ್ರು. ಇದಲ್ಲದೆ ಮುಂಬೈನ ಮತ್ತೆರಡು ಸ್ಥಳಗಳಲ್ಲೂ ಎನ್​ಸಿಬಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply