ಹೋಟೆಲ್‌ಗಳಿಗೆ ಶಾಕ್‌! ವಾಣಿಜ್ಯ LPG ದರದಲ್ಲಿ ₹25 ಏರಿಕೆ!

masthmagaa.com:

ವಾಣಿಜ್ಯ ಬಳಕೆ ಅಡುಗೆ ಅನಿಲ ದರ ಮಾರ್ಚ್‌ ಮೊದಲ ದಿನವೇ ಏರಿಕೆಯಾಗಿದೆ. ತೈಲ ಕಂಪನಿಗಳು ಹೋಟೆಲ್‌, ರೆಸ್ಟೋರೆಂಟ್‌ ಮೊದಲಾದ ಕಡೆ ಹೆಚ್ಚಾಗಿ ಬಳಸುವ ಕಮರ್ಷಿಯಲ್‌ ಗ್ಯಾಸ್ ಸಿಲಿಂಡರ್‌ ದರವನ್ನು ಹೆಚ್ಚಿಸಿವೆ. ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 25.50 ರೂ. ಮತ್ತು ಮುಂಬೈನಲ್ಲಿ 26 ರೂ. ದುಬಾರಿಯಾಗಿದೆ. ಈ ಮೂಲಕ ತೈಲ ಮಾರುಕಟ್ಟೆ ಕಂಪನಿಗಳು ಸತತ ಎರಡನೇ ತಿಂಗಳೂ 19 ಕೆಜಿ ತೂಕದ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ ದರವನ್ನು ಏರಿಕೆ ಮಾಡಿದಂತಾಗಿವೆ. ಆದರೆ, ಮನೆಗಳಲ್ಲಿ ಅಡುಗೆಗೆ ಬಳಸುವ 14 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

-masthmagaa.com

Contact Us for Advertisement

Leave a Reply