ಲಡಾಕ್‌ ಕೇಂದ್ರಾಡಳಿತ ಪ್ರದೇಶದಲ್ಲಿ ರಾಜ್ಯ ಸ್ಥಾನಮಾನದ ಕೂಗು!

masthmagaa.com:

ಕೇಂದ್ರಾಢಳಿತ ಪ್ರದೇಶ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡ್ಬೇಕು, ಸಂವಿಧಾನದ 6ನೇ ಷೆಡ್ಯೂಲ್‌ಗೆ ಸೇರಿಸ್ಬೇಕು ಅಂತ ಅಲ್ಲಿನ ಜನರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಅಂದ್ರೆ ಈಶಾನ್ಯ ರಾಜ್ಯಗಳಿಗೆ ಕೊಟ್ಟಿರೋ ತರ ಲಡಾಖ್‌ಗೂ ಬುಡಕಟ್ಟು ರಾಜ್ಯ ಸ್ಥಾನಮಾನ ನೀಡುವಂತೆ ಸ್ಟ್ರೈಕ್‌ ನಡೆದಿದೆ. ಅಲ್ಲದೆ ಸ್ಥಳೀಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ, ಲೆಹ್ ಮತ್ತು ಕಾರ್ಗಿಲ್‌ಗಳಿಗೆ ಪ್ರತ್ಯೇಕ ಸಂಸದೀಯ ಸ್ಥಾನಗಳನ್ನ ನೀಡ್ಬೇಕು ಅಂತ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಲೇಹ್‌ ಅಪೆಕ್ಸ್‌ ಬಾಡಿ(LAB) ಹಾಗೂ ಕಾರ್ಗಿಲ್‌ ಡೆಮಾಕ್ರಟಿಕ್‌ ಅಲೈಯನ್ಸ್(‌KDA) ಸಂಘಟನೆಗಳು ಈ ಬಗ್ಗೆ ಜನವರಿ 23ರಂದೇ ಕೇಂದ್ರ ಗೃಹ ಸಚಿವಾಲಯಕ್ಕೆ ಮೆಮೊರೆಂಡಮ್‌ ಸಲ್ಲಿಸಿದ್ವು. ಇದ್ರಲ್ಲಿ ಜಮ್ಮು ಕಾಶ್ಮೀರ ರೀಆರ್ಗನೈಸೇಷನ್‌ ಆಕ್ಟ್‌-2019ಕ್ಕೆ ತಿದ್ದುಪಡಿ ತರ್ಬೇಕು. ಆ ಮೂಲಕ ರಾಜ್ಯದ ಸ್ಥಾನಮಾನ ನೀಡ್ಬೇಕು ಅಂತ ಆಗ್ರಹಿಸಲಾಗಿತ್ತು. ಅಲ್ಲದೆ ಸುಪ್ರಿಂ ಕೋರ್ಟ್‌ ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ರೀಸ್ಟೋರ್‌ ಮಾಡಲಾಗತ್ತೆ, ಆದ್ರೆ ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಲಿದೆ ಅಂತ ಹೇಳಿದ್ದನ್ನ ಮೆನ್ಶನ್‌ ಮಾಡಲಾಗಿತ್ತು. ಇನ್ನು ಲಡಾಖ್‌ನಲ್ಲಿ ಜನಪರವಾದ ದನಿಗಳು ಈಗ ಇಲ್ಲವಾಗಿವೆ. ನಾವು ಜಮ್ಮು ಕಾಶ್ಮೀರದ ಭಾಗವಾಗಿದ್ದಾಗ, ಲಡಾಖ್‌ನಿಂದ ಜಮ್ಮು ಕಾಶ್ಮೀರ ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ನಮ್ಮ ಪ್ರತಿನಿಧಿಗಳಿದ್ರು. ಆದ್ರೆ ಈಗ ನಮಗೆ ರೆಪ್ರೆಸೆಂಟೇಶನ್ನೇ ಇಲ್ಲʼ ಅಂತ ಅಲ್ಲಿನ ಜನ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ನೇತೃತ್ವದ ಹೈ ಲೆವೆಲ್‌ ಕಮಿಟಿ ಲೇಹ್‌ ಹಾಗೂ ಕಾರ್ಗಿಲ್‌ ಪ್ರತಿನಿಧಿಗಳ ಜೊತೆಗೆ ಮೀಟಿಂಗ್‌ ನಡೆಸಿತ್ತು. ಅಲ್ಲದೆ ಈ ಪ್ರದೇಶಗಳ ಜನರ ಡಿಮ್ಯಾಂಡ್ಸ್‌ ಏನೇನಿದೆ ಅಂತ ಸಚಿವಾಲಯ ಕೇಳಿತ್ತು. ಇದ್ರ ಸರ್ಕಾರ ಈ ಬಗ್ಗೆ ಬೇಗ ರಿಯಾಕ್ಟ್‌ ಮಾಡ್ತಿಲ್ಲ ಅಂತ ಜನರು ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply