ʻಕೈʼನಿಂದ 39 ಸೈನಿಕರ ಫಸ್ಟ್ ಲಿಸ್ಟ್‌: ವೈನಾಡಿನಿಂದ ಮತ್ತೆ ರಾಹುಲ್‌!

masthmagaa.com:

ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್‌ ಪಕ್ಷ ಇದೀಗ 39 ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ ರಿಲೀಸ್‌ ಮಾಡಿದೆ. ದಿಲ್ಲಿಯಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡಿಸಿದ ಬಳಿಕ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನ ಅಧಿಕೃತವಾಗಿ ಘೋಷಿಸಿದೆ. ಪ್ರಮುಖವಾಗಿ ಕೇರಳದ ವೈನಾಡು ಕ್ಷೇತ್ರದಿಂದ ರಾಹುಲ್‌ ಗಾಂಧಿ, ಹಾಗೂ ಮಲಪ್ಪುರಂನಿಂದ ಕೆಸಿ ವೇಣುಗೋಪಾಲ್,‌ ತ್ರಿವೇಂದ್ರಮ್‌ನಿಂದ ಶಶಿ ತರೂರ್‌ ಕಣಕ್ಕಿಳಿಯಲಿದ್ದಾರೆ. ಇನ್ನು ರಾಜ್ಯದ 6 ಲೋಕಸಭಾ ಕ್ಷೇತ್ರಗಳ ಕ್ಯಾಂಡಿಡೆಟ್‌ಗಳನ್ನ ಹೆಸರನ್ನ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ್‌, ಶಿವಮೊಗ್ಗದಿಂದ ಗೀತಾ ಶಿವರಾಜ್‌ ಕುಮಾರ್‌, ಮಂಡ್ಯದಿಂದ ಸ್ಟಾರ್‌ ಚಂದ್ರು ಕೈ ಪರ ತೊಡೆ ತಟ್ಟೊಕೆ ಸಜ್ಜಾಗಿದ್ದಾರೆ.

-masthmagaa.com

Contact Us for Advertisement

Leave a Reply