ಕಾಂಗ್ರೆಸ್‌ ಅಕೌಂಟ್‌ ಫ್ರೀಜ್‌! ಮೋದಿಗೆ ʻನಶೆʼ ಎಂದ ಮಲ್ಲಿಕಾರ್ಜುನ ಖರ್ಗೆ!

masthmagaa.com:

ಲೋಕಸಭಾ ಚುನಾವಣೆಗೆ ಇನ್ನೇನು 2 ತಿಂಗಳು ಬಾಕಿಯಿರೋವಾಗ ಕಾಂಗ್ರೆಸ್‌ನ ಬ್ಯಾಂಕ್‌ ಖಾತೆಗಳನ್ನ ಸ್ಥಗಿತಗೊಳಿಸಿರೋ ಘಟನೆ ನಡೆದಿದೆ. ಆದಾಯ ತೆರಿಗೆ ಪಾವತಿ ಬಾಕಿ ಇದ್ದಿದ್ರಿಂದ IT ಇಲಾಖೆ ಈ ರೀತಿ ಮಾಡಿದೆ. ಆದ್ರೆ ಕೆಲವೇ ಗಂಟೆಗಳಲ್ಲಿ IT ಟ್ರಿಬ್ಯೂನಲ್‌ ಆದೇಶದ ಮೇರೆಗೆ ಮತ್ತೆ ಫ್ರೀ ಮಾಡಿದೆ. ಈ ವಿಚಾರವಾಗಿ ಮೊದಲು ಕಾಂಗ್ರೆಸ್‌ ಖಜಾಂಚಿ ಅಜಯ್‌ ಮಾಕನ್‌ ಸುದ್ದಿಘೋಷ್ಟಿ ನಡೆಸಿ ತಿಳಿಸಿದ್ರು. ನಮ್ಮ ಚೆಕ್‌ಗಳನ್ನ ಬ್ಯಾಂಕ್‌ಗಳು ತಗೋಳ್ತಾ ಇಲ್ಲಾ ಅನ್ನೋ ಸುದ್ದಿ ಬಂತು. ಈ ಬಗ್ಗೆ ವಿಚಾರಿಸಿದಾಗ, ಕಾಂಗ್ರೆಸ್‌ ಮತ್ತು ಯೂತ್‌ ಕಾಂಗ್ರೆಸ್‌ ಅಕೌಂಟ್‌ಗಳನ್ನ ಫ್ರೀಜ್‌ ಮಾಡಿರೋದಾಗಿ ಗೊತ್ತಾಯ್ತು. 2019ರ ಹಣಕಾಸು ವರ್ಷದಲ್ಲಿ 210 ಕೋಟಿ ತೆರಿಗೆ ಪಾವತಿ ಮಾಡೋದು ಬಾಕಿ ಇದೆ ಅಂತ ಆದಾಯ ತೆರಿಗೆ ಇಲಾಖೆ ಹೇಳಿತ್ತು. ನಮಗೆ ಈಗ ಯಾವುದೇ ರಾಜಕೀಯ ಚಟುವಟಿಕೆ ನಡೆಸೋಕಾಗ್ತಿಲ್ಲ. ಈ ಹಣವನ್ನ ನಾವು ಕಾರ್ಪೋರೇಟ್‌ ಬ್ಯಾಂಕ್‌ಗಳಿಂದ ಪಡೆದಿರ್ಲಿಲ್ಲ. ಜನರ ಮೂಲಕ ಸಂಗ್ರಹಿಸಿದ್ವಿ. ಮೋದಿ ಸರ್ಕಾರ ಡೆಮಾಕ್ರಸಿಯನ್ನೇ ಫ್ರೀಜ್‌ ಮಾಡಿದೆ ಅಂತ ಹೇಳಿದ್ರು. AICC ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಕೂಡ ಟ್ವೀಟ್‌ ಮಾಡಿ, ಅಧಿಕಾರದ ಅಮಲಿನಲ್ಲಿರೋ ಮೋದಿ ಸರ್ಕಾರ ಲೋಕಸಭಾ ಚುನಾವಣೆಗೆ ಮುನ್ನವೇ ದೇಶದ ಅತಿದೊಡ್ಡ ವಿರೋಧ ಪಕ್ಷದ ಖಾತೆಯನ್ನ ಸ್ಥಗಿತಗೊಳಿಸಿದೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಅಂತ ಹೇಳಿದ್ರು. ಆದ್ರೆ ಬಳಿಕ ಕಾಂಗ್ರೆಸ್‌, ಆದಾಯ ತೆರಿಗೆ ನ್ಯಾಯ ಮಂಡಳಿ ITATಗೆ ಮನವಿ ಸಲ್ಲಿಸಿದೆ. ಆಗ ITAT, ʻಕಾಂಗ್ರೆಸ್‌ ಅಕೌಂಟ್‌ಗಳ ಆ್ಯಕ್ಸೆಸ್‌ ಪಡೆಯೋಕೆ ಯಾವ್ದೇ ರೀತಿಯ ನಿರ್ಬಂಧಗಳಿಲ್ಲ. ಆದ್ರೆ ಅಕೌಂಟ್‌ಲ್ಲಿ 115 ಕೋಟಿ ಹಂಗೇ ಇಡ್ಬೇಕು. ಅದ್ರ ಮೇಲಿನ ಹಣವನ್ನ ಬಳಸಬಹುದು ಅಂತ ಹೇಳಿದೆ.

-masthmagaa.com

Contact Us for Advertisement

Leave a Reply