ಮೋದಿ ಭಾರತೀಯ ಸೈನ್ಯವನ್ನು ರಾಜಕೀಯ ಕಾರಣಗಳಿಗೆ ಬಳಸಿಕೊಳ್ಳುತ್ತಿದ್ದಾರೆ: ಖರ್ಗೆ ಆಪಾದನೆ

masthmagaa.com:

ಪ್ರಧಾನಿ ನರೇಂದ್ರ ಮೋದಿ ಇಂಡಿಯನ್‌ ಆರ್ಮಿಯ ವರ್ಚಸ್ಸನ್ನ ಚುನಾವಣೆಗಳಲ್ಲಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಅಂತ ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಈ ಬಗ್ಗೆ X ನಲ್ಲಿ ಬರೆದುಕೊಂಡಿರೋ ಅವರು “ಮೋದಿ ದೇಶವನ್ನ ಕಾಪಾಡೋ ಸೈನಿಕರ ಪಾಪುಲಾರಿಟಿಯನ್ನ ಬಳಸಿಕೊಂಡು ತಮ್ಮನ್ನ ತಾವು ಪ್ರಮೋಟ್‌ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಮಾಡೋ ಮೂಲಕ ಕಳೆದ 75 ವರ್ಷಗಳಲ್ಲಿ ಯಾರೂ ಮಾಡದ ಕೆಲಸವನ್ನ ಮೋದಿ ಮಾಡ್ತಿದ್ದಾರೆ. ಸೇನೆಯ ಮೂಲಕ ದೇಶಾದ್ಯಂತ 822 ಸೆಲ್ಫೀ ಪಾಯಿಂಟ್‌ಗಳನ್ನ ತೆರೆಸಿ ತಮ್ಮ ಸ್ಕೀಮ್‌ಗಳನ್ನ ಪ್ರಮೋಟ್‌ ಮಾಡ್ತಿದ್ದಾರೆ. ಕಾಂಗ್ರೆಸ್‌ಗೆ ನಮ್ಮ ಸೈನಿಕರ ಧೈರ್ಯ, ತ್ಯಾಗ-ಬಲಿದಾನಗಳ ಬಗ್ಗೆ ಹೆಮ್ಮೆ ಇದೆ. ಆದ್ರೆ ರಾಷ್ಟ್ರೀಯತೆಯ ಪಾಠ ಮಾಡೋ BJP ಇಂಡಿಯನ್‌ ಆರ್ಮಿಯ ಘನತೆಗೆ ಧಕ್ಕೆ ತಂದಿದೆ” ಅಂತ ಖರ್ಗೆ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply