masthmagaa.com:

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಅಕ್ಟೋಬರ್​​ 31ರಂದು ನಡೆದ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದ ದೃಶ್ಯವನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಬಿಜೆಪಿಗೆ ಹೆದರಿ ಪಟೇಲರಿಗೆ ಗೌರವ ತೋರಿದ ಕಾಂಗ್ರೆಸ್​​​ನವರ ಕರ್ಮಕಥೆ ಅಂತ ಟ್ವೀಟ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಾತಾಡಿರೋ ಗುಸುಗುಸು ಪಿಸು ಪಿಸು ತುಂಬಾ ವೈರಲ್ ಆಗಿದೆ.

ವೇದಿಕೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೂತಿದ್ರು. ಅವರ ಹಿಂದೆ ಹಾರ ಹಾಕಿರೋ ಇಂದಿರಾ ಗಾಂಧಿ ಫೋಟೋ ಇರಿಸಲಾಗಿತ್ತು. ಈ ವೇಳೆ ಪಕ್ಕದಲ್ಲಿದ್ದ ಡಿ.ಕೆ ಶಿವಕುಮಾರ್ ಬಳಿ ಮಾತನಾಡೋ ಸಿದ್ದರಾಮಯ್ಯ, ವಲ್ಲಭ್​ ಬಾಯ್ ಪಟೇಲ್​ರದ್ದೂ ಇವತ್ತೇ ಜನ್ಮ ದಿನ ಅಂತೆ.. ಅವರದ್ದೂ ಒಂದು ಫೋಟೋ ಇಡ್ಬೇಕಿತ್ತು ಅಂತಾರೆ.. ಅದಕ್ಕೆ ಡಿಕೆ ಶಿವಕುಮಾರ್​​, ಅದು ಜನ್ಮದಿನ.. ಇದು ಪುಣ್ಯಸ್ಮರಣೆ.. ನಾವು ಎರಡು ಫೋಟೋ ಇಡೋದಿಲ್ಲ. ನಾವು ಕಾಂಗ್ರೆಸ್ಸು ಅಂತಾರೆ. ಅದಕ್ಕೆ ಪ್ರತಿಕ್ರಿಯಿಸೋ ಸಿದ್ದರಾಮಯ್ಯ, ಬಟ್ ಏನಾಗುತ್ತೆ ಅಂದ್ರೆ ಬಿಜೆಪಿಯವರು ಅಡ್ವಾಂಟೇಜ್ ತಗೊಳ್ತಾರೆ ಅಂತ ಹೇಳ್ತಾರೆ. ಅದಕ್ಕೆ ಮತ್ತೆ ಉತ್ತರಿಸೋ ಡಿಕೆ ಶಿವಕುಮಾರ್, ನಾವು ನೋಡ್ದೆ ಇರೋದಾ..? ನಮ್ಮಲ್ಲಿ ಯಾವತ್ತೂ ಇಟ್ಟಿಲ್ಲ.. ಅದಕ್ಕೆ.. ಅಂತಾರೆ. ಆಮೇಲೆ ಇಬ್ರೂ ಸುಮ್ಮನಾಗ್ತಾರೆ.

ಆದ್ರೆ ಸ್ವಲ್ಪ ಹೊತ್ತು ಬಿಟ್ಟು ಡಿಕೆ ಶಿವಕುಮಾರ್​​ಗೆ ಏನೋ ಹೊಳೆದಂತಾಗಿ, ಹಿಂದೆ ಇದ್ದ ವ್ಯಕ್ತಿಯನ್ನು ಕರೆದಿದ್ದಾರೆ. ವಲ್ಲಭ್​ಭಾಯ್ ಪಟೇಲ್ ಫೋಟೋ ಇದ್ಯಾ ಅಂತ ಕೇಳಿದ್ದಾರೆ. ಹಾ.. ಇದೆ ಅಂತ ಹೇಳಿದ್ದಕ್ಕೆ ತಗೊಂಡು ಬಾ ಅಂತ ಉತ್ತರಿಸಿದ್ದಾರೆ. ನಂತರ ಸಿದ್ದರಾಮಯ್ಯ ಬಳಿ ಮಾತನಾಡೋ ಡಿಕೆ ಶಿವಕುಮಾರ್, ಫೋಟೋ ಇಡಿಸಿ ಬಿಡ್ತೀನಿ ಅಂತಾರೆ.. ಅದಕ್ಕೆ ಪ್ರತಿಕ್ರಿಯಿಸೋ ಸಿದ್ದರಾಮಯ್ಯ ಇಡಿಸಿದ್ರೆ ಒಳ್ಳೆಯದು ಅಂತಾರೆ.. ನಂತರ ಹಿಂದೆ ಇಂದಿರಾ ಗಾಂಧಿ ಫೋಟೋವನ್ನು ಸ್ವಲ್ಪ ಸರಿಸಿ, ಸರ್ದಾರ್ ಪಟೇಲ್ ಅವರ ಫೋಟೋವನ್ನು ಇರಿಸಲಾಗುತ್ತೆ.

-masthmagaa.com

Contact Us for Advertisement

Leave a Reply