ಬಿಜೆಪಿಗೆ ಹಾರಿದ ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಬಮ್‌!

masthmagaa.com:

ಚುನಾವಣೆ ಹೊತ್ತಲ್ಲೇ ಇದೀಗ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗ್ತಿದೆ. ಕೆಲ ದಿನಗಳ ಹಿಂದಷ್ಟೇ ಗುಜರಾತ್‌ನ ಸೂರತ್‌ ಕ್ಷೇತ್ರದ ಅಭ್ಯರ್ಥಿ ನಿಲೇಶ್‌ ಕುಂಭಾನಿ ಚುನಾವಣೆಯಿಂದ ಹಿಂದೇಟು ಹಾಕಿದ್ರು. ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ರು. ಇದೀಗ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಅದೇ ರೀತಿ ಘಟನೆ ನಡೆದಿದೆ. ಇಂದೋರ್‌ನ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್‌ ಬಮ್‌ ಚುನಾವಣಾ ರೇಸ್‌ನಿಂದ ಹೊರಬಂದು ಬಿಜೆಪಿಗೆ ಹಾರಿದ್ಧಾರೆ. ಈ ಬಗ್ಗೆ ಮಧ್ಯ ಪ್ರದೇಶದ ಬಿಜೆಪಿ ನಾಯಕ ಕೈಲಾಶ್‌ ವಿಜಯವರ್ಗೀಯ ತಮ್ಮ `X’ ಖಾತೆಯಲ್ಲಿ ಪೋಸ್ಟ್‌ ಮಾಡಿ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದಾರೆ. ಮೇ 13ರಂದು ಇಂದೋರ್‌ ನಲ್ಲಿ ನಾಲ್ಕನೇ ಹಂತದ ಚುನಾವಣೆ ನಡೆಯಲಿದ್ದು, ಇಂದು…ಏಪ್ರಿಲ್‌ 29 ಅಲ್ಲಿನ ಅಭ್ಯರ್ಥಿಗಳಿಗೆ ನಾಮಿನೇಷನ್‌ ಫೈಲ್‌ ಮಾಡಲು ಕೊನೇ ದಿನಾಂಕ. ಇದೇ ವೇಳೆ ಅಕ್ಷಯ್‌ ಬಮ್‌ ತಮ್ಮ ನಾಮಿನೇಷನ್‌ ಹಿಂಪಡೆದು, ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಆ ಮೂಲಕ, ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಒಳಗಾಗಿದೆ. ಸ್ಥಳೀಯ ನಾಯಕರ ವಿರೋಧದ ನಡುವೆಯೂ ಅಕ್ಷಯ್ ಭಾಮ್‌ಗೆ ಟಿಕೆಟ್ ನೀಡಲಾಗಿತ್ತು. ಇನ್ನು ಇದಕ್ಕೆ ಬೇಸರ ವ್ಯಕ್ತಪಡಿಸಿರೋ ಸ್ಥಳೀಯ ಕಾಂಗ್ರೆಸ್‌ ನಾಯಕ ದೇವೇಂದ್ರ ಸಿಂಗ್‌, ಕೊನೆ ಕ್ಷಣದಲ್ಲಿ ಅವರು ನಾಮಪತ್ರವನ್ನು ಹಿಂದಕ್ಕೆ ಪಡೀತಾರೆ ಅಂತ ನಾನು ನಮ್ಮ ಕಾಂಗ್ರೆಸ್ ನಾಯಕರಿಗೆ ಹಿಂದೆನೇ ಎಚ್ಚರಿಕೆ ನೀಡಿದ್ದೆ, ಆದರೆ, ನನ್ನ ಮಾತಿಗೆ ಸೊಪ್ಪು ಹಾಕಲಿಲ್ಲ, ಹಲವು ವರ್ಷಗಳಿಂದ ಕಾಂಗ್ರೆಸ್ ಪಾರ್ಟಿಗೆ ದುಡಿಯುತ್ತಿದ್ದೇನೆ, ಎಚ್ಚರಿಕೆಯ ನಂತರವೂ ಇಂತವರಿಗೆ ಟಿಕೆಟ್ ನೀಡಿರುವುದಕ್ಕೆ ನನಗೆ ವಿಷಾದವಿದೆ ” ಅಂತ ಬೇಸರ ವ್ಯಕ್ತ ಪಡಿಸಿದ್ದಾರೆ. ಅಕ್ಷಯ್‌ ಬಮ್‌ ಜೊತೆ ಒಟ್ಟು 3 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.

-masthmagaa.com

Contact Us for Advertisement

Leave a Reply