ಅನರ್ಹ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ. ಅನರ್ಹ ಶಾಸಕರ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ರು. ಶಾಸಕರ ರಾಜೀನಾಮೆ ಬಾಕಿ ಉಳಿಸಿಕೊಂಡು ನಂತರ ಅನರ್ಹಗೊಳಿಸಲಾಗಿದೆ. ಈ ಮೂಲಕ ಸ್ಪೀಕರ್ ತಾರತಮ್ಯ ತೋರಿದ್ದಾರೆ. ರಾಜೀನಾಮೆ ಸಲ್ಲಿಕೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದ್ದರೂ ಅನರ್ಹಗೊಳಿಸಿದ್ದಾರೆ. ಚುನಾವಣಾ ಆಯೋಗ ಅನರ್ಹ ಶಾಸಕರು ಸ್ಪರ್ಧೆ ಮಾಡಬಹುದು ಎಂದು ಹೇಳಿದೆ. ಆದ್ರೆ ಅನರ್ಹರು ಎಂಬ ಹಣೆಪಟ್ಟಿ ಹೊತ್ತು ಚುನಾವಣೆಗೆ ಹೋಗಲು ನಮ್ಮ ಕಕ್ಷಿದಾರರಿಗೆ ಇಷ್ಟವಿಲ್ಲ. ಹೀಗಾಗಿ ಅನರ್ಹತೆಗೇ ತಡೆ ನೀಡಿ ಎಂದು ಮುಕುಲ್ ರೋಹ್ಟಗಿ ಮನವಿ ಮಾಡಿದ್ರು.

ಇಂದು ಕೇವಲ ಅನರ್ಹ ಶಾಸಕರ ಪರ ವಾರವನ್ನು ಆಲಿಸಿದ ಸುಪ್ರೀಂಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿತು. ನಾಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರ ವಾದ ಆಲಿಸಲಿದೆ.

Contact Us for Advertisement

Leave a Reply