ಹೊಸ ಸಂಸತ್ತಿಗೆ ʻಮೋದಿ ಮಲ್ಟಿಪ್ಲೆಕ್ಸ್‌ʼ ಎಂದ ಕಾಂಗ್ರೆಸ್‌! ಯಾಕೆ?

masthmagaa.com:

ವಿಶೇಷ ಅಧಿವೇಶನ ಮುಕ್ತಾಯವಾದ ಬೆನ್ನಲ್ಲೇ ಹೊಸ ಪಾರ್ಲಿಮೆಂಟ್‌ ಕಟ್ಟದ ವಿನ್ಯಾಸವನ್ನ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಟೀಕಿಸಿದ್ದು ಹೊಸ ಸಂಸತ್‌ ಭವನವನ್ನ ʻಮೋದಿ ಮಲ್ಟಿಪ್ಲೆಕ್ಸ್‌ʼ ಅಥವಾ ಮೋದಿ ಮ್ಯಾರಿಯೆಟ್‌ ಅಂತ ಕರೆಯಬೇಕು ಎಂದಿದ್ದಾರೆ. Xನಲ್ಲಿ ಪೋಸ್ಟ್‌ ಮಾಡಿರೋ ಅವ್ರು, ಹೊಸ ಪಾರ್ಲಿಮೆಂಟ್‌ನ ʻಮೋದಿ ಮಲ್ಟಿಪ್ಲೆಕ್ಸ್‌ʼ ಅನ್ಬೇಕು. ಯಾಕಂದ್ರೆ ಈ ಕಟ್ಟಡ ಕೂಡ ಮೋದಿಯವ್ರಂತೆ ಪ್ರಚಾರ ಪಡೆದಿದೆ. ಆದ್ರೆ ನಾಲ್ಕು ದಿನದಲ್ಲಿ ನಾನು ನೋಡಿದ್ದು ಅಂದ್ರೆ, ಇದ್ರಲ್ಲಿ ಚರ್ಚೆ ಮತ್ತು ಸಂಭಾಷಣೆಯ ಕೊಲೆಯಾಗಿದೆ. ಹಳೆಯ ಸಂಸತ್ತಿನಂತೆ ಹೊಸ ಸಂಸತ್ತಿನಲ್ಲಿ ಸದಸ್ಯರ ನಡುವೆ ಸಂವಾದಕ್ಕೆ ಸ್ಥಳವಿಲ್ಲ, ಒಂದು ಸದನದಿಂದ ಮತ್ತೊಂದು ಸದನಕ್ಕೆ ಬೇಗ ಹೋಗಿ ಬರೋದಕ್ಕೆ ಆಗಲ್ಲ. ಸಂಸದರನ್ನ ದುರ್ಬಿನ್‌ ಹಾಕಿ ಹುಡುಕ್ಬೇಕು, ಅಷ್ಟು ದೂರ ದೂರ ದೂರ ಇರ್ತಾರೆ. ಆರ್ಕಿಟೆಕ್ಚರ್‌ ಅಥ್ವಾ ವಾಸ್ತುಶೈಲಿ ಪ್ರಜಾಪ್ರಭುತ್ವವನ್ನ ಕೊಲ್ಲಬಹುದಾದರೆ, ಪ್ರಧಾನಿಯವ್ರು ಸಂವಿಧಾನವನ್ನ ಪುನಃ ಬರೆಯದೆ ಈಗಾಗಲೇ ಆ ಕೆಲಸ ಯಶಸ್ವಿಯಾಗಿ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕಾಂಗ್ರೆಸ್‌ ಅತ್ಯಂತ ಕೆಳಮಟ್ಟದಲ್ಲಿ ಯೋಚಿಸೋದ್ರಲ್ಲೇ ಇನ್ನೂ ಕೀಳುಮಟ್ಟವನ್ನ ತೋರಿಸುತ್ತೆ. ಈ ಮೂಲಕ 140 ಕೋಟಿ ಭಾರತೀಯರಿಗೆ ಅವಮಾನ ಮಾಡಿದೆ ಅಂತ ತಿರುಗೇಟು ನೀಡಿದ್ದಾರೆ.

-masthmagaa.com

Contact Us for Advertisement

Leave a Reply