masthmagaa.com:

ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರೋ ಪುದುಚೆರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಭಾರಿ ಹಿನ್ನಡೆಯಾಗಿದೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್​ ಸರ್ಕಾರ ಪತನವಾಗಿದೆ. ಪುದುಚೆರಿ ಸಿಎಂ ವಿ. ನಾರಾಯಣಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದು, ಸರ್ಕಾರ ಬಿದ್ದಿದೆ. ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡ ಬೆನ್ನಲ್ಲೇ ಸಿಎಂ ನಾರಾಯಣಸ್ವಾಮಿ ಲೆಫ್ಟಿನೆಂಟ್ ಗವರ್ನರ್​ಗೆ ರಾಜೀನಾಮೆ ಸಲ್ಲಿಸಿದ್ರು. ಈ ವೇಳೆ ಮಾತನಾಡಿದ ನಾರಾಯಣಸ್ವಾಮಿ, ಮಾಜಿ ಲೆಫ್ಟಿನೆಂಟ್​ ಗವರ್ನರ್ ಕಿರಣ್ ಬೇಡಿ ಮತ್ತು ಕೇಂದ್ರ ಸರ್ಕಾರ ವಿಪಕ್ಷಗಳ ಜೊತೆ ಸೇರ್ಕೊಂಡ್​ ಸರ್ಕಾರವನ್ನ ಬೀಳಿಸಿದ್ರು ಅಂತ ಹೇಳಿದ್ದಾರೆ. ಅಂದ್ಹಾಗೆ ಕಳೆದೊಂದು ತಿಂಗಳಲ್ಲಿ ಕಾಂಗ್ರೆಸ್ ಮತ್ತು ಅದಕ್ಕೆ ಬೆಂಬಲ ನೀಡಿದ್ದ ಡಿಎಂಕೆ ಪಕ್ಷದ ನಾಲ್ಕೈದು ಶಾಸಕರು ರಾಜೀನಾಮೆ ನೀಡಿದ್ದರಿಂದ ನಾರಾಯಣಸ್ವಾಮಿ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನೆಲೆ ಇವತ್ತು ಬಹುಮತ ಸಾಬೀತುಪಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದರು. ಬಹುಮತ ಸಾಬೀತು ಮಾಡಲಾಗದೆ ನಾರಾಯಣಸ್ವಾಮಿ ರಿಸೈನ್ ಮಾಡಿದ್ದಾರೆ. ಮತ್ತೊಂದುಕಡೆ ನಾವೀಗ ಸರ್ಕಾರ ರಚಿಸಲ್ಲ, ಮುಂಬರೋ ಚುನಾವಣೆಯಲ್ಲಿ ಗೆದ್ದು ಎನ್​ಡಿಎ ಸರ್ಕಾರವನ್ನ ರಚಿಸುತ್ತೇವೆ ಅಂತ ಪುದುಚೆರಿ ಬಿಜೆಪಿ ಘಟಕ ಹೇಳಿದೆ.

-masthmagaa.com

Contact Us for Advertisement

Leave a Reply