ಕಾಂಗ್ರೆಸ್ ಪಾದಯಾತ್ರೆಗೆ ಬಿಜೆಪಿ ನಾಯಕರು ಹೇಳಿದ್ದೇನು?

masthmagaa.com:

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬರೀ ಡಿಪಿಆರ್ ಮಾಡಕ್ಕೆ 4 ವರ್ಷ ತಗೊಂಡಿದ್ದಾರೆ. ಕೊನೆಗೂ ಅದನ್ನು ಸಬ್​ಮಿಟ್ ಮಾಡಕ್ಕೆ ಅವರಿಗೆ ಆಗಲಿಲ್ಲ. ಬೆಟ್ಟ ಅಗೆದು ಇಲಿ ತೆಗೆದಿದ್ದಾರೆ.. ಇದೇ ಅವರ ಸಾಧನೆ.. ಕೊರೋನಾ ರೂಲ್ಸ್ ಸಂಬಂಧ ಅವರಿಗೆ ಈಗಾಗಲೇ ನೋಟಿಸ್ ಕೊಟ್ಟಿದ್ದೀವಿ. ನಮ್ಮ ಅಧಿಕಾರಿಗಳು ಹೋಗಿ ನೀವು ಮಾಡ್ತಿರೋದು ಸರಿಯಲ್ಲ ಅಂತ ಹೇಳಿದ್ದಾರೆ.. ಆದ್ರೂ ಉಡಾಫೆಯಿಂದ ಈ ಪಾದಯಾತ್ರೆ ಕೈಗೊಂಡಿದ್ದಾರೆ. ಇವರ ವಿರುದ್ದ ಕಾನೂನು ಪ್ರಕಾರ ಏನ್ ಕ್ರಮ ತೆಗೆದುಕೊಳ್ಳಬೇಕೋ ಅದ್ನ ತಗೊಳ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ಈ ಸಂಬಂಧ ಸಚಿವರ ಜೊತೆ ಸಭೆ ಕೂಡ ನಡೆಸಿದ್ದಾರೆ.

ಕಾಂಗ್ರೆಸ್ ಪಾದಯಾತ್ರೆ ಕಪಟ ಬೀದಿನಾಟಕ ಅಂತ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಹೇಳಿದ್ದಾರೆ. ಇವರ ನಾಟಕ ಜನ ನೋಡ್ತಿದ್ದಾರೆ. 2013ರಿಂದ 2019ರವರೆಗೂ ಅಧಿಕಾರದಲ್ಲಿದ್ರು. ಆದ್ರೂ ಡಿಪಿಆರೇ ಮಾಡಿಲ್ಲ.. ಈಗ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಮಾಡ್ತಿರೋ ಬೀದಿ ನಾಟಕ ಮಾಡ್ತಿದ್ದಾರೆ.. ಮೇಕೆದಾಟು ಯೋಜನೆಗೆ ಏನೇನ್ ಸಿದ್ದತೆ ಬೇಕೋ ಎಲ್ಲವನ್ನೂ ನಾವು ಮಾಡ್ತಿದ್ದೀವಿ. ಈ ವಿಚಾರ ಕಾಂಗ್ರೆಸ್​​ಗೂ ಗೊತ್ತಾಗಿದೆ. ಹೀಗಾಗಿ ಅದ್ರ ಲಾಭ ಪಡೆದುಕೊಳ್ಳಲು ಈ ರೀತಿ ಬೀದಿ ನಾಟಕ ಮಾಡ್ತಿದೆ ಅಂತ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಗೃಹಸಚಿವ ಅರಗ ಜ್ಞಾನೇಂದ್ರ, ಕೊರೋನಾ ವೇಳೆ ರಾಜಕೀಯ ಮಾಡೋದು ಸರಿಯಲ್ಲ.. ನೈತಿಕತೆ ಇಲ್ಲದೇ ಕಾಂಗ್ರೆಸ್ ಹೋರಾಡ್ತಿದ್ದು, ಮಕ್ಕಳು, ಮಹಿಳೆಯರನ್ನು ಕೂಡ ಕರ್ಕೊಂಡು ಬಂದಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಅಂಥವರ ವಿರುದ್ಧ ಕೇಸ್ ಹಾಕುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೀವಿ. ಇಷ್ಟು ವರ್ಷ ಅಧಿಕಾರದಲ್ಲಿದ್ರೂ ಮಾಡಿಲ್ಲ. ಈಗ ಹೋರಾಟ ಮಾಡ್ತಾರಂತೆ.. ಅದ್ರ ಬದಲು ಅವರು ನದಿ ದಡದಲ್ಲಿ ಕುಳಿತು ಮಂಡಿಯೂರಿ, ಇಷ್ಟು ವರ್ಷ ಅಧಿಕಾರ ಕೊಟ್ರು ಮಾಡಕ್ಕಾಗಿಲ್ಲ ಅಂತ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply