masthmagaa.com:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿರುವಾಗಲೇ ಕಾಂಗ್ರೆಸ್​ ಪಕ್ಷದಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ,  ‘ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನ ಕಾಂಗ್ರೆಸ್ ಪಕ್ಷ ವಿರೋಧಿಸಬೇಕಿದೆ. ಈ ಮಸೂದೆ ಜಾರಿಗೆ ಬಂದ್ರೆ ತಮ್ಮ ಜೀವನಕ್ಕಾಗಿ ಗೋಮಾಂಸವನ್ನೇ ಅವಲಂಬಿಸಿರುವ ಅದೆಷ್ಟೋ ಜನ ಉದ್ಯೋಗ ಕಳೆದುಕೊಳ್ಳುತ್ತಾರೆ. ಆರ್​ಎಸ್​ಎಸ್​ ಸಿದ್ಧಪಡಿಸಿದ ಯಾವುದೇ ಮಸೂದೆಯನ್ನಾದ್ರೂ ಜಾರಿಗೆ ತರೋದೇ ಬಿಜೆಪಿಯವರ ಕೆಲಸ’ ಅಂತ ಕಿಡಿಕಾರಿದ್ದಾರೆ. ಇದಕ್ಕೂ ಮೊದಲು ಮುಸ್ಲಿಂ ಸಮುದಾಯದ ಕೆಲ ನಾಯಕರು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಪ್ರಸ್ತಾವಿತ ಮಸೂದೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ಅಲ್ಲದೆ ಈ ಮಸೂದೆ ವಿರುದ್ಧ ಹೋರಾಟ ಮಾಡುವಂತೆ ಆಗ್ರಹಿಸಿದ್ರು. ಇದರ ಬೆನ್ನಲ್ಲೇ ಮಾಜಿ ಸಿಎಂ ಈ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply