ಪಾಕ್ ಗೆ ಉತ್ತರ ಓಕೆ..ಪ್ರಚಾರ ಯಾಕೆ..? ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಚಾರ ಕುರಿತು ನೀಡಿದ್ದ ಹೇಳಿಕೆಗೆ ಭಾರತ ತಕ್ಕ ತಿರುಗೇಟು ನೀಡಿತ್ತು. ಇದೀಗ ಈ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ, ಕಾಶ್ಮೀರದ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಉತ್ತರಕ್ಕೆ ಕಾಂಗ್ರೆಸ್ ಬೆಂಬಲ ಇದೆ. ಆದ್ರೆ ಇಮ್ರಾನ್ ಅವರ ಭಾಷಣವನ್ನು ಬಿಜೆಪಿಯವರು ಪ್ರಚಾರ ಮಾಡ್ತಿದ್ದಾರೆ. ಇದು ಸರಿಯಲ್ಲ ಅಂತ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಭಾರತ, ಕಾಶ್ಮೀರ, ಮೋದಿ ವಿರುದ್ಧವೇ ಮಾತನಾಡಿದ್ದರು. ಆದ್ರೆ ಪ್ರಧಾನಿ ಮೋದಿ ಮಾತ್ರ ಪಾಕಿಸ್ತಾನದ ಹೆಸರೂ ತೆಗೆಯದೇ ಮೌನವಹಿಸಿ, ತಿರುಗೇಟು ಕೊಟ್ಟಿದ್ದರು. ನಂತರ ಭಾರತದ ಪ್ರತಿನಿಧಿಗಳು ಪಾಕ್ ಪ್ರಧಾನಿ ಇಮ್ರಾನ್ ಖಾನ್‍ಗೆ ತಿರುಗೇಟು ನೀಡಿ ಮಾನ ಹರಾಜು ಹಾಕಿದ್ದರು.

Contact Us for Advertisement

Leave a Reply