ನಾವು ಅಧಿಕಾರಕ್ಕೆ ಬಂದ್ರೆ ಮೀಸಲಾತಿಯನ್ನ ಶೇ.75 ಕ್ಕೆ ಏರಿಸೋದು ಶತಸಿದ್ದ: ಸಿದ್ದರಾಮಯ್ಯ!

masthmagaa.com:

ಇನ್ನು ಈ ಬಾರಿ ಮೀಸಲಾತಿ ವಿಚಾರ ಕೂಡ ಚುನಾವಣೆ ಅಸ್ತ್ರವಾಗಿಬಿಟ್ಟಿದೆ. ಇದೀಗ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ಶೇ.75ರಷ್ಟು ಮೀಸಲಾತಿ ಹೆಚ್ಚಳ ಮಾಡುವುದು ಶತಸಿದ್ದ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈಗಿರುವ ಶೇ.50ರಷ್ಟು ಮೀಸಲಾತಿ ಮಿತಿಯನ್ನ ಶೇ. 75ಕ್ಕೆ ಹೆಚ್ಚಿಸಲಾಗುವುದು. ಶೆಡ್ಯುಲ್ 9ರ ಅನ್ವಯ ಮೀಸಲಾತಿ ಜಾರಿ ಮಾಡುತ್ತೇವೆ. ತಮಿಳುನಾಡಿನಲ್ಲಿ ಶೇ.69ರಷ್ಟಿದೆ. ಇಂದ್ರಸಹನಿ ಪ್ರಕರಣದಲ್ಲಿ ಶೇ.50ರಷ್ಟು ಮೀರಬಾರದು ಅಂತ ಹೇಳಿದೆ. ಆದರೆ, ಮೀಸಲಾತಿಯನ್ನು ಹೆಚ್ಚಿಸಲೇಬಾರದು ಅಂತೇನೂ ಇಲ್ಲ. ಮುಸ್ಲಿಮರಿಗೆ, ಲಿಂಗಾಯತರಿಗೆ, ಒಕ್ಕಲಿಗ ಸೇರಿದಂತೆ ಎಲ್ಲ ಸಮುದಾಯಗಳಿಗೂ ನ್ಯಾಯ ಕಲ್ಪಿಸಲಾಗುವುದು. ಈ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಚರ್ಚೆ ಮಾಡ್ತೀವಿ ಅಂತ ಸಿದ್ರಾಮಯ್ಯ ಹೇಳಿದ್ದಾರೆ. ಇತ್ತ 2024ರ ಲೋಕಸಭೆ ಚುನಾವಣೆಗೆ ತಯಾರಿ ಮಾಡ್ತಿರೋ ರಾಹುಲ್‌ ಗಾಂಧಿ ಕೂಡ ಮೀಸಲಾತಿ ಆಫರ್‌ ಕೊಟ್ಟಿದ್ದಾರೆ. ಕೇಂದ್ರದಲ್ಲಿ 2024ಕ್ಕೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದುಹಾಕ್ತೀವಿ..ಆ ರೀತಿ ಮೀಸಲಾತಿ ಮಿತಿ ಅವೈಜ್ಞಾನಿಕ ಅಂತ ರಾಹುಲ್‌ ಗಾಂಧಿ ಹೇಳಿದ್ದಾರೆ.) ಇದೆಲ್ಲದ್ರ ಮಧ್ಯೆ, ಕಾಂಗ್ರೆಸ್‌ ಪಕ್ಷಕ್ಕೆ ಇವತ್ತು ನಟ ಶಿವರಾಜ್‌ಕುಮಾರ್‌ ಅವರ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅಧಿಕೃತವಾಗಿ ಸೇರ್ಪಡೆಯಾಗಿದಾರೆ.

-masthmagaa.com

Contact Us for Advertisement

Leave a Reply