G20ಯಲ್ಲಿ ದೊಡ್ಡ ಗೆಲುವು! ಭಾರತದ ಮಾತಿಗೆ ವಿಶ್ವ ಮನ್ನಣೆ!

masthmagaa.com:

ದೆಹಲಿಯಲ್ಲಿ ಇಂದು ನಡೆದ ಮೊದಲ ದಿನದ ಜಿ20 ಶೃಂಗಸಭೆಯಲ್ಲಿ 21ನೇ ಖಾಯಂ ಸದಸ್ಯವಾಗಿ ಆಫ್ರಿಕನ್‌ ಒಕ್ಕೂಟಕ್ಕೆ ಸ್ಥಾನ ನೀಡಲಾಗಿದೆ. ಈ ಬಗ್ಗೆ ಆಫ್ರಿಕಾದ ವಿವಿಧ ದೇಶಗಳ ನಾಯಕರು ಸಂಸತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಾಡ್‌ ದೇಶದ ಮಾಜಿ ಪ್ರಧಾನಿ ಮೌಸಾ ಫಕಿ ಮಹಾಮತ್‌ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಹಲವು ವರ್ಷಗಳಿಂದ ಈ ಸ್ಥಾನಮಾನಕ್ಕಾಗಿ ಆಫ್ರಿಕಾದ ನಾಯಕರು ಪ್ರಯತ್ನಿಸುತ್ತಿದ್ದರು. ಇದೀಗ ಆಫ್ರಿಕಾ ಒಕ್ಕೂಟ ಜಿ20ಯಲ್ಲಿ ಸ್ಥಾನ ಪಡೆದಿರುವುದಕ್ಕೆ ಸಂತಸವಾಗುತ್ತಿದೆ’ ಎಂದಿದ್ದಾರೆ. ಇತ್ತ ಭಾರತದಲ್ಲಿ ಇಂದು ನಡೆದ ಸಭೆ ಯಶಸ್ವಿಯಾಗಿದ್ದು, ಜಿ20 ನಾಯಕರು ʻದೆಹಲಿ ಘೋಷಣೆʼ ಅಥ್ವಾ NewDelhi Leaders Declaration ನ್ನ ಸಂಪೂರ್ಣವಾಗಿ ಅಡಾಪ್ಟ್‌ ಮಾಡಿಕೊಂಡಿದ್ದಾರೆ ಅಂತ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅಂದ್ಹಾಗೆ ಈ ಘೋಷಣೆಯಲ್ಲಿ ಪ್ರಮುಖವಾಗಿ ರಷ್ಯಾ- ಯುಕ್ರೇನ್‌ ಯುದ್ಧದ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಯುಗ ಯುದ್ಧದ ಯುಗವಲ್ಲ ಅನ್ನೋದನ್ನ ಪುನರುಚ್ಛಾರ ಮಾಡಲಾಗಿದೆ. ಜೊತೆಗೆ ನ್ಯೂಕ್ಲಿಯಾರ್‌ ಶಸ್ತ್ರಾಸ್ತ್ರಗಳನ್ನ ಬಳಸುವ ಬಗ್ಗೆ ಬೆದರಿಕೆ ಹಾಕೋದನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂತ ಘೋಷಣೆಯಲ್ಲಿ ತಿಳಿಸಲಾಗಿದೆ. ಈ ಘೋಷಣೆಗೆ ಜಾಗತಿಕ ನಾಯಕರು ಒಮ್ಮತ ಸೂಚಿಸಿದ್ದಾರೆ. ಹೀಗಾಗಿ ಎಲ್ಲಾ 20 ರಾಷ್ಟ್ರಗಳು ಇದಕ್ಕೆ ಒಪ್ಪಿಗೆ ನೀಡಿದ್ದು ಇದೊಂದು ಐತಿಹಾಸಿಕ ಸಾಧನೆ ಅಂತ ಕೇಂದ್ರ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply