ನವಂಬರ್‌ 26 ರಂದು ಸಂವಿಧಾನ ದಿನ ಆಚರಿಸುವಂತೆ ಶಾಲಾ-ಕಾಲೇಜುಗಳಿಗೆ ಸೂಚನೆ!

masthmagaa.com:

ನವಂಬರ್‌ 26ರಂದು ರಾಜ್ಯದ ಎಲ್ಲ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಸಂವಿಧಾನ ದಿನ (Constitution Day) ಆಚರಿಸುವಂತೆ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಕುರಿತು ರಸಪ್ರಶ್ನೆಗಳು, ಚರ್ಚೆಗಳು ಮತ್ತು ಪ್ರಬಂಧ ಬರಹ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಬೇಕು ಅಂತ ಇಲಾಖೆ ಸೂಚಿಸಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಆ ದಿನದಂದು ಸಂವಿಧಾನದ ಪೀಠಿಕೆಯನ್ನ ಓದಲು ತಿಳಿಸಬೇಕು. ಸಂವಿಧಾನದ ಪೀಠಿಕೆಯನ್ನ ಬೆಳಗ್ಗೆ 11 ಗಂಟೆಗೆ ಓದಬೇಕು. ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಆ ಸಮಯವನ್ನು ಅನುಸರಿಸಬೇಕು ಅಂತ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ದೇಶದ ಸಂವಿಧಾನವನ್ನ ನವಂಬರ್‌ 26, 1949 ರಂದು ಅಂಗೀಕರಿಸಲಾಗಿತ್ತು ಈ ನೆನಪಿಗಾಗಿ ಪ್ರತಿವರ್ಷ ಸಂವಿಧಾನದ ದಿನ ಅಂತ ಆಚರನೆ ಮಾಡಲಾಗ್ತಿದೆ.

-masthmagaa.com

Contact Us for Advertisement

Leave a Reply