BIG BREAKING: ರಾಜ್ಯದಲ್ಲಿ ಸೋಮವಾರದಿಂದ ಲಸಿಕೆ ವಿತರಣೆ ಆರಂಭ

masthmagaa.com:

ಕೊರೋನಾ ಲಸಿಕೆಗೆ ಕಾಯ್ತಿರುವ ರಾಜ್ಯದ ಜನರಿಗೆ ಗುಡ್​ ನ್ಯೂಸ್​. ರಾಜ್ಯದಲ್ಲಿ ಸೋಮವಾರದಿಂದ ಲಸಿಕೆ ವಿತರಣೆ ಆರಂಭವಾಗಲಿದೆ ಅಂತ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನಾಳೆ ಲಸಿಕೆ ಕಳಿಸಲಿದೆ. ಒಟ್ಟು 13.90 ಲಕ್ಷ ಕೊರೋನಾ ಲಸಿಕೆಯ ಡೋಸ್​ ರಾಜ್ಯಕ್ಕೆ ಬರಲಿದೆ. ಅದನ್ನ ಎಲ್ಲಾ ಜಿಲ್ಲೆಗಳಿಗೆ ಸರಬರಾಜು ಮಾಡಿ ಬಹುಶಃ ಸೋಮವಾರದಿಂದ ಲಸಿಕೆ ವಿತರಣೆ ಪ್ರಾರಂಭ ಮಾಡ್ತೀವಿ ಅಂತ ಸಚಿವರು ಹೇಳಿದ್ದಾರೆ. ಅಲ್ಲಿಗೆ ಕರ್ನಾಟಕದಲ್ಲಿ ಸೋಮವಾರದಿಂದ ಲಸಿಕೆ ಅಭಿಯಾನ ಆಗೋದು ಬಹುತೇಕ ಪಕ್ಕಾ ಆಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುತ್ತೆ. ಲಸಿಕೆ ಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇವತ್ತು ಡ್ರೈ ರನ್​ ನಡೀತಿದೆ. ಅಂದ್ರೆ ಪ್ರಾಕ್ಟಿಸ್ ನಡೀತಿದೆ.

-masthmagaa.com

Contact Us for Advertisement

Leave a Reply