ಭಾರತದ ಸಹಾಯ ನೆನೆದು ಮೋದಿಗೆ ಬ್ರೆಜಿಲ್ ಅಧ್ಯಕ್ಷರ ಪತ್ರ..! ಹನುಮನ ಉಲ್ಲೇಖ

masthmagaa.com:

ದೆಹಲಿ: ವಿಶ್ವದಾದ್ಯಂತ ಕೊರೋನಾ ವೈರಸ್ ಹಾವಳಿ ಜಾಸ್ತಿಯಾಗುತ್ತಲೇ ಇದೆ. ಈ ನಡುವೆ ಭಾರತದಿಂದ ಜಗತ್ತಿನ ಕೊರೋನಾ ಪೀಡಿತ ದೇಶಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡ್ತಿದೆ. ಅಮೆರಿಕ ಬಳಿಕ ಈಗ ಬ್ರೆಜಿಲ್ ಕೂಡ ಭಾರತದ ಈ ಸಹಾಯಕ್ಕೆ ಧನ್ಯವಾದ ತಿಳಿಸಿದೆ. ಬ್ರೆಜಿಲ್ ರಾಷ್ಟ್ರಪತಿ ಜೋರ್ ಬೋಲ್​ಸೋನಾರೋ ಪ್ರಧಾನಿ ನರೇಂದ್ರ ಮೋದಿಯವರಿಗೆ ಒಂದು ಪತ್ರವನ್ನು ಬರೆದಿದ್ದು, ಭಾರತ ಮಾಡಿದ ಸಹಾಯವನ್ನು ಹನುಮ ಲಂಕೆಗೆ ಹೊತ್ತು ಹಾರಿದ್ದ ಸಂಜೀವಿನ ಪರ್ವತಕ್ಕೆ ಹೋಲಿಕೆ ಮಾಡಿದ್ದಾರೆ.

ನಿನ್ನೆ ಪತ್ರ ಬರೆದಿರುವ ಜೋರ್ ಬೋಲ್​ಸೋನಾರೋ, ಈ ಬಿಕ್ಕಟ್ಟಿನ ಸಮಯದಲ್ಲಿ ರಾಮಾಯಣದಲ್ಲಿ ರಾಮನ ಸಹೋದರ ಲಕ್ಷ್ಮಣನ ಪ್ರಾಣ ಉಳಿಸಲು ಹನುಮಂತ ಸಂಜೀವನಿ ಪರ್ವತವನ್ನೇ ಹೊತ್ತು ತಂದಂತೆ ಭಾರತ ಬ್ರೆಜಿಲ್‌ಗೆ ಸಹಾಯ ಮಾಡಿದೆ  ಎಂದು ಹೇಳಿದ್ದಾರೆ. ಇನ್ನೊಂದು ವಿಚಾರ ಅಂದ್ರೆ ಇಂದು ಭಾರತದಲ್ಲಿ ಹನುಮ ಜಯಂತಿ ಆಚರಿಸಲಾಗುತ್ತಿದೆ.

ನಿನ್ನೆಯಷ್ಟೇ ಭಾರತ ಕೊರೋನಾದಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿರುವ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿದಂತೆ ಅಗತ್ಯ ಔಷಧಗಳನ್ನು ಪೂರೈಸುತ್ತೇವೆ ಎಂದು ತಿಳಿಸಿತ್ತು.

-masthmagaa.com

Contact Us for Advertisement

Leave a Reply