ಕೊರೋನಾದಿಂದ ಆಫ್ರಿಕಾದಲ್ಲಿ ಮಾರಣಹೋಮ: WHO ಎಚ್ಚರಿಕೆ

masthmagaa.com:

ಕೊರೋನಾ ವೈರಸ್ ನಿಯಂತ್ರಿಸದೇ ಇದ್ದರೆ ಮುಂದಿನ 12 ತಿಂಗಳಲ್ಲಿ ಆಫ್ರಿಕಾ ಖಂಡದಲ್ಲಿ ಈ ಕಾಯಿಲೆಯಿಂದ 83 ಸಾವಿರದಿಂದ 1.90 ಲಕ್ಷ ಜನ ಸಾಯಬಹುದು. 2.9 ಕೋಟಿಯಿಂದ 4.4 ಕೋಟಿಯಷ್ಟು ಜನರಿಗೆ ಸೋಂಕು ತಗುಲಬಹುದು ಅಂತ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಅಲ್ಲದೆ ಹಲವು ವರ್ಷಗಳ ಕಾಲ ಆಫ್ರಿಕಾದಲ್ಲಿ ಕೊರೋನಾ ವೈರಾಣು ಹೊಗೆಯಾಡಬಹುದು ಎಂದಿದೆ. ಕಳೆದ ತಿಂಗಳಷ್ಟೇ ಆಫ್ರಿಕಾದಲ್ಲಿ 1 ಕೋಟಿ ಜನರಿಗೆ ಈ ಕಾಯಿಲೆ ಹರಡಬಹುದು ಎಂದಿದ್ದ ವಿಶ್ವ ಆರೋಗ್ಯ ಸಂಸ್ಥೆ ಈಗ ಮತ್ತಷ್ಟು ಆಘಾತಕಾರಿ ಮಾಹಿತಿ ನೀಡಿದೆ. ಅಮೆರಿಕ, ಯುರೋಪ್​ಗೆ ಹೋಲಿಸಿದ್ರೆ ಆಫ್ರಿಕಾದಲ್ಲಿ ಆರೋಗ್ಯ ಸೇವೆ ಉತ್ತಮವಾಗಿಲ್ಲ. ಅಲ್ಲಿ 10 ಲಕ್ಷ ಜನರಿಗೆ ಕೇವಲ 9 ತೀವ್ರ ನಿಗಾ ಘಟಕ ಬೆಡ್​ಗಳಿವೆ.

ಇನ್ನು ಕೊರೋನಾ ವೈರಸ್ ತಡೆಯಲು ಸೂಕ್ತ ಕ್ರಮಗಳನ್ನ ಕೈಗೊಳ್ಳದೇ ಇದ್ದರೆ ಈ ಕಾಯಿಲೆ ಜೊತೆಗೆ ಜನ ಹಲವು ವರ್ಷಗಳ ಕಾಲ ಜೀವನ ನಡೆಸಬೇಕಾಗುತ್ತದೆ. ಹೀಗಾಗಿ ಹೆಚ್ಚೆಚ್ಚು ಪರೀಕ್ಷೆ ನಡೆಸಿ, ಸೋಂಕಿತರನ್ನು ಪತ್ತೆಹಚ್ಚಿ, ಅವರನ್ನು ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆಫ್ರಿಕಾ ಖಂಡದಲ್ಲಿ ಇದುವರೆಗೆ 51 ಸಾವಿರ ಜನರಿಗೆ ಸೋಂಕು ತಗುಲಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply