ದೆಹಲಿ ಈಗ ಹೊಗೆಮುಕ್ತ..! ವಾಕಿಂಗ್, ಜಾಗಿಂಗ್​ ಹೋದ್ರೆ ಜೈಲು ಫಿಕ್ಸ್​..!

masthmagaa.com:

ದೆಹಲಿ: ದೇಶದಲ್ಲಿ ಲಾಕ್​ಡೌನ್ ಹೇರಿದ್ದರಿಂದ ಸದಾ ಹೊಗೆ, ವಾಯುಮಾಲಿನ್ಯದಿಂದ ಕೂಡಿರುತ್ತಿದ್ದ ದೆಹಲಿಯಲ್ಲಿ ಸ್ವಚ್ಛಂದ ಗಾಳಿ ಬೀಸುತ್ತಿದೆ. ಹೀಗಾಗಿ ಜನ ಲಾಕ್​ಡೌನ್ ಇದ್ರೂ ವಾಕಿಂಗ್, ಜಾಗಿಂಗ್ ಹೋಗ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಜಂಟಿ ಪೊಲೀಸ್ ಆಯುಕ್ತೆ ಶಾಲಿನಿ ಸಿಂಗ್ ಎಚ್ಚರಿಸಿದ್ದಾರೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೆಕ್ಷನ್ 144 ಹೇರಲಾಗಿದೆ. ಹೀಗಾಗಿ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮಾತ್ರವೇ ಮನೆಯಿಂದ ಹೊರಗೆ ಬರಬೇಕು. ಅದು ಬಿಟ್ಟು ಕಾರಣವಿಲ್ಲದೇ ಹೊರಗೆ ಅಡ್ಡಾಡುವಂತಿಲ್ಲ. ಅಲ್ಲದೆ ಪಾರ್ಕ್​​​, ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗುತ್ತೆ. ಯಾರಾದ್ರೂ ಜಾಗಿಂಗ್, ವಾಕಿಂಗ್ ಬಂದ್ರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ತೀವಿ.. ಸ್ವಲ್ಪದಿನ ಮನೆಯಲ್ಲೇ ವ್ಯಾಯಾಮ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.

ಒಂದ್ವೇಳೆ ಕೇಸ್ ದಾಖಲಾದಲ್ಲಿ 6 ತಿಂಗಳು ಜೈಲು ಅಥವಾ 1 ಸಾವಿರ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆ ಇದೆ. ಹೀಗಾಗಿ ಸ್ವಲ್ಪ ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply