2019ರ ಡಿಸೆಂಬರ್​​ನಲ್ಲೇ ಅಮೆರಿಕದಲ್ಲಿಕೊರೋನಾ ಬಂದಿತ್ತು!

masthmagaa.com:

ಅಮೆರಿಕದಲ್ಲಿ 2019ರ ಡಿಸೆಂಬರ್​ನಿಂದಲೇ ಕೊರೊನಾ ಹರಡುವಿಕೆ ಶುರುವಾಗಿತ್ತು ಅನ್ನೋದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಅಮೆರಿಕದಲ್ಲಿ 2020ರ ಜನವರಿ 21ರಂದು ಮೊದಲ ಕೊರೊನಾ ಪ್ರಕರಣ ಅನೌನ್ಸ್​ ಮಾಡಲಾಗಿತ್ತು. ಆದ್ರೆ ದಿ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್​​ ಸಂಸ್ಥೆ 2020ರ ಜನವರಿ 2ರಿಂದ ಮಾರ್ಚ್​​ 18ರವರೆಗೆ 24 ಸಾವಿರ ಜನರಿಂದ ಪಡೆದ ರಕ್ತದ ಸ್ಯಾಂಪಲ್​​ಗಳನ್ನು ಸಂಶೋಧನೆಗೆ ಒಳಪಡಿಸಿದೆ. ಇದ್ರಲ್ಲಿ 9 ಮಂದಿಯ ರಕ್ತದ ಸ್ಯಾಂಪಲ್​​ನಲ್ಲಿ ಕೊರೋನಾ ವಿರುದ್ಧದ ಪ್ರತಿಕಾಯಗಳು ಪತ್ತೆಯಾಗಿವೆ. ಅದ್ರಲ್ಲಿ ಇಲಿನಾಯಿಸ್​​​​ನಲ್ಲಿ 2020ರ ಜನವರಿ 7ರಂದು ರಕ್ತದ ಸ್ಯಾಂಪಲ್ ಕೊಟ್ಟಿದ್ದ ವ್ಯಕ್ತಿಯಲ್ಲೂ ಪ್ರತಿಕಾಯಗಳು ಪತ್ತೆಯಾಗಿವೆ. ಅಂದ್ರೆ ಈ ಕೊರೋನಾ ಪ್ರತಿಕಾಯಗಳು ಉತ್ಪತ್ತಿಯಾಗಲು ಕನಿಷ್ಠ 2 ವಾರವಾದ್ರೂ ಬೇಕಾಗುತ್ತೆ. ಅಂದ್ರೆ ಈ ವ್ಯಕ್ತಿಗೆ ಕನಿಷ್ಠ 2 ವಾರ ಮೊದಲು ಅಂದ್ರೆ ಡಿಸೆಂಬರ್ 24ಕ್ಕೂ ಮುನ್ನ ಕೊರೋನಾ ಬಂದಿರಬೇಕು.. ಅಂದ್ರೆ ಇಲಿನಾಯಿಸ್​​ನಲ್ಲಿ ಡಿಸೆಂಬರ್ 24ಕ್ಕೂ ಮುನ್ನವೇ ಕೊರೋನಾ ಹರಡುವಿಕೆ ಶುರುವಾಗಿತ್ತು ಅಂತ ಕ್ಲಿನಿಕಲ್ ಇನ್ಫೆಕ್ಶಿಯಸ್​ ಡಿಸೀಸ್​​​​ ಜರ್ನಲ್​ನಲ್ಲಿ ಪ್ರಕಟಿಸಲಾದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಹೆಲ್ತ್ ನ ವರದಿಯಲ್ಲಿ ಹೇಳಲಾಗಿದೆ. ಅಂದಹಾಗೆ ಈ ಹಿಂದೆ ಸೆಂಟರ್ ಫರ್ ಡಿಸೀಸ್ ಕಂಟ್ರೋಲ್ ಕೂಡ 2019ರ ಡಿಸೆಂಬರ್​ನಲ್ಲೇ ಅಮೆರಿಕದಲ್ಲಿ ಕೊರೊನಾ ಪತ್ತೆಯಾಗಿತ್ತು ಅನ್ನೋದಕ್ಕೆ ಸಾಕ್ಷ್ಯಗಳಿವೆ ಅಂತ ಹೇಳಿತ್ತು. ಅಂದಹಾಗೆ ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಚೀನಾದಲ್ಲಿ 2019ರ ಡಿಸೆಂಬರ್​​ನಲ್ಲಿ ಕೊರೋನಾ ಕೇಸ್ ದಾಖಲಾಗಿತ್ತು. ಆದ್ರೆ ಇದು ಕೂಡ ಸುಳ್ಳು.. ಚೀನಾದಲ್ಲಿ ನವೆಂಬರ್ 17ರಂದೇ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿತ್ತು ಅನ್ನೋ ವಾದ ಕೂಡ ಇದೆ. ಮತ್ತೊಂದ್ಕಡೆ ಅಮೆರಿಕದಲ್ಲಿ ಕೊರೋನಾಗೆ ಮೃತಪಟ್ಟವರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ. 113 ದಿನದಲ್ಲಿ ಮೃತರ ಸಂಖ್ಯೆ 5ರಿಂದ 6 ಲಕ್ಷಕ್ಕೆ ಏರಿಕೆಯಾಗಿದೆ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply