32 ದೇಶಗಳಿಗೆ ಒಮೈಕ್ರಾನ್! ಯಾವ ದೇಶದಲ್ಲಿ ಏನೇನಾಯ್ತು?

masthmagaa.com:
ವಿಶ್ವದಾದ್ಯಂತ ಒಮಿಕ್ರಾನ್ ಭೀತಿ ಮನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಈ ವೇಷ ಹಾಕಿದ ಕೊರೋನಾ ಈಗ ಜಗತ್ತಿನ 38 ದೇಶಗಳಿಗೆ ವ್ಯಾಪಿಸಿದೆ. ಆದ್ರೆ ಈವರೆಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಒಮೈಕ್ರಾನ್ ವೇರಿಯಂಟ್​ ರೂಪಾಂತರದ ವೇಳೆ ಕಾಮನ್ ಕೋಲ್ಡ್​​ಗೆ ಕಾರಣವಾಗೋ ವೈರಾಣುವಿನಿಂದ ವಂಶವಾಹಿಯನ್ನು ಪಡ್ಕೊಂಡಿರೋ ಸಾಧ್ಯತೆ ಇದೆ ಅಂತ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಯಾಕಂದ್ರೆ ಒಮೈಕ್ರಾನ್​​​ನಲ್ಲಿರೋ ಜೆನೆಟಿಕ್ ಸೀಕ್ವೆನ್ಸ್​ ಈ ಹಿಂದೆ ಬಂದ ಯಾವುದೇ ಕೊರೋನಾ ವೇರಿಯಂಟ್​​ಗೂ ಹೋಲಿಕೆಯಾಗ್ತಿಲ್ಲ. ಹೀಗಾಗಿ ಅದು ಕಾಮನ್​ ಕೋಲ್ಡ್​ ವೈರಾಣುವಿನಿಂದ ಅದನ್ನು ಪಡ್ಕೊಂಡಿರಬಹುದು ಅಂತ ತಜ್ಞರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಈ ವೈರಾಣು ಹಾವಳಿ ಮಿತಿ ಮೀರ್ತಾ ಇದೆ. ಕಳೆದ 24 ಗಂಟೆಯಲ್ಲಿ 16,055 ಮಂದಿಗೆ ಸೋಂಕು ತಗುಲಿದ್ದು, 25 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಆದ್ರೆ ಇತ್ತೀಚೆಗೆ ಮಕ್ಕಳಲ್ಲೂ ಕೊರೋನಾ ಪತ್ತೆಯಾಗ್ತಿರೋ ಪ್ರಮಾಣ ಹೆಚ್ಚಾಗ್ತಿದೆ. ಹಿಂದಿನ ಅಲೆಗಳಲ್ಲಿ ಮಕ್ಕಳಲ್ಲಿ ಕೊರೋನಾ ಹರಡೋ ಪ್ರಮಾಣ ಕಡಿಮೆ ಇತ್ತು. ಆದ್ರೆ ಈ 4ನೇ ಅಲೆಯಲ್ಲಿ 5 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೋನಾ ಹರಡುವಿಕೆ ಜಾಸ್ತಿಯಾಗ್ತಿದೆ ಅಂತ ತಜ್ಞರು ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 5352 ಮಂದಿಗೆ ಕೊರೋನಾ ಸೋಂಕು ಬಂದಿದ್ದು, 70 ಮಂದಿ ಪ್ರಾಣ ಬಿಟ್ಟಿದ್ದಾರೆ. ಈವರೆಗೆ 9 ಮಂದಿಗೆ ಒಮೈಕ್ರಾನ್ ತಳಿ ಅಂಟ್ಕೊಂಡಿದೆ ಅಂತ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಹಲವು ನಿರ್ಬಂಧಗಳನ್ನು ಕೂಡ ಹೇರಲಾಗಿದೆ.

ಸದ್ಯ ಒಮೈಕ್ರಾನ್ ವೇರಿಯಂಟ್ ಈವರೆಗೆ ಪತ್ತೆಯಾಗಿರೋ ವೇರಿಯಂಟ್​​ಗಳಿಗಿಂತ ಭಿನ್ನ ಮತ್ತು ಅಪಾಯಕಾರಿ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಅಂತ ಸಿಂಗಾಪುರ್​ ತಜ್ಞರು ತಿಳಿಸಿದ್ದಾರೆ. ಅಷ್ಟೇ ಅಲ್ಲ.. ಈಗ ಲಭ್ಯವಿರೋ ಲಸಿಕೆಗಳು ಒಮೈಕ್ರಾನ್ ವಿರುದ್ಧ ಕೆಲಸ ಮಾಡಲ್ಲ.. ಕಡಿಮೆ ಪವರ್ ಹೊಂದಿದೆ ಅಂತ ಕೂಡ ಹೇಳೋಕೆ ಆಗಲ್ಲ.. ಈ ಸಂಬಂಧ ಹೆಚ್ಚಿನ ಅಧ್ಯಯನದ ಅಗತ್ಯತೆ ಇದೆ ಅಂತ ಹೇಳಿದ್ದಾರೆ.

ಕೊರೋನಾ ಇಷ್ಟೆಲ್ಲಾ ಹಾವಳಿ ಇಡ್ತಿದ್ರೆ ಬ್ರೆಜಿಲ್ ಅಧ್ಯಕ್ಷ ಜೇರ್ ಬೋಲ್ಸೊನಾರೋ ಮಾತ್ರ ಕೊರೋನಾಗೆ ಕ್ಯಾರೆ ಅಂತಿಲ್ಲ. ಕೊರೋನಾ ಇಲ್ವೇ ಇಲ್ಲ ಅಂತ ಓಡಾಡ್ತಿದ್ದ ಬೋಲ್ಸೊನಾರೋ ಅಕ್ಟೋಬರ್​​ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಾತಾಡುವಾಗ ಕೊರೋನಾ ಲಸಿಕೆ ಹಾಕಿಸಿಕೊಂಡ್ರೆ ಏಡ್ಸ್​ ರೋಗ ಬರುತ್ತೆ ಅಂತ ಹೇಳಿಕೆ ನೀಡಿದ್ರು. ಇದೀಗ ಬ್ರೆಜಿಲಿಯನ್ ಸುಪ್ರೀಂಕೋರ್ಟ್​ ನ್ಯಾಯಾಧೀಶರು ಜೇರ್ ಬೋಲ್ಸೊನಾರೋ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಬೋಲ್ಸೊನಾರೋ ಈ ಹೇಳಿಕೆ ಬಳಿಕ ಫೇಸ್​ಬುಕ್ ಮತ್ತು ಯೂಟ್ಯೂಬ್​​ನಿಂದ ಬ್ಯಾನ್ ಮಾಡಲಾಗಿದೆ.

ದಕ್ಷಿಣ ಪೆಸಿಫಿಕ್​ ಸಮುದ್ರಲ್ಲಿರೋ ಕುಕ್​ ದ್ವೀಪರಾಷ್ಟ್ರದಲ್ಲಿ ಮೊದಲ ಕೊರೋನಾ ವೈರಾಣು ಪತ್ತೆಯಾಗಿದೆ. ಪ್ರವಾಸಿಗರಿಗೆ ಗಡಿಯನ್ನು ತೆರೆಯಲು ಸಿದ್ಧತೆ ಮಾಡ್ಕೊಳ್ತಿರುವ ಹೊತ್ತಲ್ಲೇ ಕೊರೋನಾ ಪ್ರಕರಣ ಪತ್ತೆಯಾಗಿದೆ. ನ್ಯೂಜಿಲೆಂಡ್​​ನಿಂದ ಬಂದಿದ್ದ 10 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದ್ದು, ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ ಅಂತ ಪ್ರಧಾನಿ ಮಾರ್ಕ್​ ಬ್ರೌನ್ ತಿಳಿಸಿದ್ದಾರೆ. ಇದು ಕೇವಲ 17 ಸಾವಿರ ಜನಸಂಖ್ಯೆ ಇರೋ ಈ ದ್ವೀಪದಲ್ಲಿ 96 ಪರ್ಸೆಂಟ್​​ನಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ಹಾಕಲಾಗಿದೆ. ಅಂದಹಾಗೆ ಕೊರೋನಾ ಮೊದಲು ಪತ್ತೆಯಾದಾಗ ಕುಕ್ ದ್ವೀಪ ವಿದೇಶಗಳಿಗೆ ತನ್ನ ಗಡಿಯನ್ನು ಬಂದ್ ಮಾಡ್ಕೊಂಡಿತ್ತು. ಆದ್ರೆ ಕಳೆದ ಜನವರಿ 14ರ ಬಳಿಕ ನ್ಯೂಜಿಲ್ಯಾಂಡ್ ಜೊತೆಗೆ ಕ್ವಾರಂಟೈನ್ ರಹಿತ ಪ್ರಯಾಣವನ್ನು ಶುರು ಮಾಡಿತ್ತು.

ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಕೋಲ್ಡ್ ಆಗಿದೆ. ಮಾತನಾಡುವಾಗ ವಾಯ್ಸ್ ಚೇಂಜ್ ಆಗಿರೋದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅವರು, ನಾನು ಪ್ರತಿದಿನ ಕೊರೋನಾ ಪರೀಕ್ಷೆ ಮಾಡಿಸ್ತಿದ್ದೀನಿ. ನೆಗೆಟಿವ್ ಬಂದಿದ. ಇದು ಜಸ್ಟ್ ಕೋಲ್ಡ್​ ಅಷ್ಟೆ.. ನಾನು ಆರಾಮಾಗಿದ್ದೀನಿ. ನನ್ನ ಮೊಮ್ಮಗನಿಗೆ ಕೋಲ್ಡ್ ಆಗಿತ್ತು. ಅವನು ನನ್ನ ಕೆನ್ನೆಗೆ ಕಿಸ್ ಕೊಡೋಕೆ ಇಷ್ಟ ಪಡ್ತಾನೆ ಅಂತ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply