masthmagaa.com:

ದೆಹಲಿ: ಕೊರೋನಾ ಕಡಿಮೆಯಾಗ್ತಿದೆ ಅನ್ನೋ ನೆಮ್ಮದಿಯಲ್ಲಿದ್ದ ಭಾರತಕ್ಕೀಗ ಹೊಸ ಕೊರೋನಾದ ಚಿಂತೆ ಶುರುವಾಗಿದೆ. ಹೀಗಾಗಿ ಇಂಗ್ಲೆಂಡ್​​​ನಿಂದ ಬರುವ ಪ್ರಯಾಣಿಕರ ಆರ್​​ಟಿ-ಪಿಸಿಆರ್ ಪರೀಕ್ಷೆ, ಪಾಸಿಟಿವ್ ಬಂದ್ರೆ ಐಸೋಲೇಷನ್​​​​​​​​​​​ಗೆ ಒಳಪಡಿಸುವ ಮತ್ತು ಸಹ ಪ್ರಯಾಣಿಕರನ್ನೂ ಕ್ವಾರಂಟೈನ್​​ಗೆ ಒಳಪಡಿಸಲು ಸೂಚಿಸಲಾಗಿದೆ. ಇಂಗ್ಲೆಂಡ್​​​ನಿಂದ ಬರುವ ಪ್ರಯಾಣಿಕರಿಗಾಗಿ ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ನಿನ್ನೆ ರಾಜ್ಯದಲ್ಲೂ ಕೂಡ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಅಂತ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ರು.

ಮಾರ್ಗಸೂಚಿ ಜಾರಿಗೊಳಿಸಿರುವ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಈ ಹೊಸ ವೈರಸ್ ಹೆಚ್ಚು ಹರಡುವ ಸಾಮರ್ಥ್ಯ ಹೊಂದಿದ್ದು, ಯುವ ಸಮುದಾಯದ ಮೇಲೆ ಪರಿಣಾಮ ಬೀರುತ್ತಿದೆ ಅಂತ ಹೇಳಿದೆ. ಹಳೆಯ ವೈರಸ್​​ ಮತ್ತು ಈ ವೈರಸ್ ನಡುವೆ ಮಹತ್ವದ 17 ಬದಲಾವಣೆಗಳಿವೆ. ಅದ್ರಲ್ಲು ಪ್ರಮುಖವಾಗಿ ಈ ಕೊರೋನಾ ಹಳೆಯ ಕೊರೋನಾಗಿಂತಲೂ ಹೆಚ್ಚು ವೇಗವಾಗಿ ಮತ್ತು ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಅಂತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply