ಹೆಮ್ಮಾರಿ ಕೊರೊನಾಗೆ ಚೀನಾದಲ್ಲಿ ಸಾವಿನ ಸಂಖ್ಯೆ 425ಕ್ಕೆ ಏರಿಕೆ..!

ಮಹಾಮಾರಿ ಕೊರೊನಾ ವೈರಸ್ ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿದೆ. ಸೋಂಕಿನಿಂದಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗ್ತಿದ್ದು, ಸತ್ತವರ ಸಂಖ್ಯೆ 425ಕ್ಕೆ ತಲುಪಿದೆ. ಸುಮಾರು 20 ಸಾವಿರ ಮಂದಿಯಲ್ಲಿ ಸೋಂಕು ಇದೆ ಎನ್ನಲಾಗ್ತಿದ್ದು ಚೀನಾ ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 64 ಜನರು ಮೃತಪಟ್ಟಿದ್ದು, ಮಹಾಮಾರಿ ವಿರುದ್ಧ ಹೋರಾಡಲು ವಿಶ್ವಸಂಸ್ಥೆಯ ಸಹಾಯ ಕೇಳಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೇವಲ 10 ದಿನದಲ್ಲಿ ಆಸ್ಪತ್ರೆ ಸಹ ತೆರೆಯಲಾಗಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಭೇಟಿ ನೀಡುವ ಸಾಧ್ಯತೆ ಇದೆ.

Contact Us for Advertisement

Leave a Reply