ಸಿಐಎ ನೇಮಿಸಿದ ಇನ್​ಫಾರ್ಮರ್​​ಗಳ ಬಗ್ಗೆ ಸ್ಫೋಟಕ ಮಾಹಿತಿ

masthmagaa.com:

ಅಮೆರಿಕದ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿಗಳು ವಿಶ್ವದಾದ್ಯಂತ ಇರೋ ಸಿಐಎ ಅಂದ್ರೆ ಸೆಂಟ್ರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಸ್ಟೇಷನ್​​ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ವಿವಿಧ ದೇಶಗಳಲ್ಲಿ ಅಮೆರಿಕಗೋಸ್ಕರ ಗೂಢಚಾರಿಕೆ ಮಾಡೋಕೆ ಅಂತ ನೇಮಕ ಮಾಡ್ತಿರೋರನ್ನ ಸೆರೆ ಹಿಡಿದು ಕೊಲ್ಲಲಾಗ್ತಿದೆ ಅಂತ ಹೇಳಿದೆ. ಕಳೆದ ಹಲವು ವರ್ಷಗಳಲ್ಲಿ ರಷ್ಯಾ, ಇರಾನ್, ಪಾಕಿಸ್ತಾನ ಮತ್ತು ಚೀನಾದಂತ ದೇಶಗಳಲ್ಲಿ ಅಮೆರಿಕದ ಸಿಐಎ ನಿಯೋಜಿಸಿದ್ದ ಗೂಢಾಚಾರಿಗಳನ್ನು ಕೆಲವು ಪ್ರಕರಣಗಳಲ್ಲಿ ಸೆರೆಹಿಡಿದು ಕೊಲ್ಲಲಾಗಿದೆ. ಇನ್ನು ಕೆಲವರನ್ನು ಸೆರೆ ಹಿಡಿದು ಡಬಲ್​ ಏಜೆಂಟ್​​ಗಳನ್ನಾಗಿ ಮಾಡಲಾಗಿದೆ ಅಂತ ಮಾಹಿತಿ ನೀಡಿದೆ. ಡಬಲ್ ಏಜೆಂಟ್ ಅಂದ್ರೆ ನಾವು ತಿಳ್ಕೊಳ್ಳೋದು ಆತ ನಮ್ಮ ಏಜೆಂಟ್ ಅಂತ.. ಆದ್ರೆ ಆತ ನಮ್ಮ ಏಜೆಂಟ್ ಆಗಿದ್ದುಕೊಂಡೇ ನಮ್ಮ ಮಾಹಿತಿಗಳನ್ನು ನಮ್ಮ ಶತ್ರುಗಳಿಗೆ ನೀಡ್ತಿರ್ತಾನೆ. ಅಂಥವರನ್ನು ಡಬಲ್ ಏಜೆಂಟ್ ಅಂತ ಕರೆಯಲಾಗುತ್ತೆ. ಕೆಲ ದೇಶಗಳು ಸಿಐಎಯ ಮಾಹಿತಿದಾರರನ್ನು ಇಂಥಾ ಡಬಲ್ ಏಜೆಂಟ್​​​ಗಳನ್ನಾಗಿ ಮಾಡಿ, ಅವರ ಮೂಲಕ ಸಿಐಎಗೆ ತಪ್ಪು ಮಾಹಿತಿ ಸಿಗುವಂತೆ ಮಾಡುತ್ತೆ. ಅಷ್ಟೇ ಅಲ್ಲ.. ಕಳೆದೊಂದು ವಾರದಲ್ಲಿ ಸಿಐಎ ನಿಯೋಜಿಸಿದ್ದ ಬೇರೆ ದೇಶಗಳ ಇನ್​ಫಾರ್ಮರ್​​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹತ್ಯೆ ಮಾಡಲಾಗಿದೆ ಅಂತ ಕೌಂಟರ್ ಇಂಟೆಲಿಜೆನ್ಸ್​ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply