3 ವರ್ಷದ ಸಂಬಂಧ..ಮದುವೆ…ಥಳಿಸಿ ಓಡಿಸಿದ..!

ಬಿಹಾರ: 3 ವರ್ಷದ ಪ್ರೀತಿ ಮದುವೆಯಾದ ಮೂರೇ ಗಂಟೆಯಲ್ಲಿ ಮಾಯವಾದ ಘಟನೆ ಬಿಹಾರದ ಬೆಗುಸರಾಯ್‍ನಲ್ಲಿ ನಡೆದಿದೆ. ಇಲ್ಲಿನ 25 ವರ್ಷದ ಜುಬೈದಾ ಖಾತೂನ್ ಎಂಬ ಮಹಿಳೆ ಗ್ರಾಮದ ಕಂಟ್ರ್ಯಾಕ್ಟರ್ ಮೊಹ್ಮದ್ ಪರ್ವೇಜ್ ಜೊತೆ 3 ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ಆದ್ರೆ ಈ ವೇಳೆ ಗರ್ಭಿಣಿಯಾದ ಜುಬೈದಾ ಅಬಾರ್ಷನ್ ಕೂಡ ಮಾಡಿಸಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಅಲ್ಲಿ ಎಲ್ಲರೂ ಸೇರಿ ಇಬ್ಬರಿಗೂ ಮದುವೆ ಮಾಡಿಸಿದ್ರು. ಆದ್ರೆ ಮದುವೆಯಾಗಿ ಮನೆಗೆ ಕರೆತಂದ ಕಂಟ್ರ್ಯಾಕ್ಟರ್ ಪರ್ವೇಜ್, ಜುಬೈದಾಗೆ ಹಿಗ್ಗಾಮುಗ್ಗ ಥಳಿಸಿ, ಓಡಿಸಿದ್ದಾನೆ.

2016ರಲ್ಲಿ ಮದುವೆಯಾಗಿದ್ದ ಜುಬೈದಾಗೆ ಪತಿ ತಲಾಖ್ ನೀಡಿದ್ದ. ಹೀಗಾಗಿ ಜುಬೈದಾ ತವರಿಗೆ ಬಂದು ನೆಲೆಸಿದ್ದರು. ಈ ವೇಳೆ ಕಂಟ್ರ್ಯಾಕ್ಟರ್ ಮೊಹಮ್ಮದ್ ಪರ್ವೇಜ್ ಎಂಬಾತ ಮದುವೆಯಾಗೋದಾಗಿ ನಂಬಿಸಿ, ಸಂಬಂಧ ಬೆಳೆಸಿದ್ದ. ಆದ್ರೆ ಜುಬೈದಾ ಗರ್ಭಿಣಿಯಾದಾಗ ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ್ದ. ಹೀಗಾಗಿಯೇ ಪರ್ವೇಜ್‍ನನ್ನು ಬಂಧಿಸಿದ್ದ ಪೊಲೀಸರು ನಂತರದಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದರು.

Contact Us for Advertisement

Leave a Reply