ಸಿಎಂ ಸಿದ್ಧರಾಮಯ್ಯಗೆ ಸಂಕಷ್ಷ: ಹಳೇ ಕೇಸ್‌ ತೆರೆಸಿ ತನಿಖೆಗೆ ಕೋರ್ಟ್‌ ಆದೇಶ

masthmagaa.com:

ಸಿಎಂ ಸಿದ್ಧರಾಮಯ್ಯಗೆ ಹಳೆಯ ಲಂಚದ ಕೇಸ್‌ ಒಂದಕ್ಕೆ ಸಂಬಂಧಿಸಿದಂತೆ ಸಂಕಷ್ಟ ಎದುರಾಗಿದೆ. ಕಳೆದ ವಾರಿ ಸಿದ್ಧರಾಮಯ್ಯ ಅವ್ರು ಮುಖ್ಯಮಂತ್ರಿ ಆಗಿದ್ದಾಗ, ಕಿಂಗ್ಸ್‌ ಕೋರ್ಟ್‌ ಸಂಸ್ಥೆಯ ವಿವೇಕಾನಂದ ಅನ್ನೋರ ಬಳಿ 1.3 ಕೋಟಿ ಹಣ ಪಡೆದಿರೋ ಆರೋಪ ಕೇಳಿಬಂದಿತ್ತು. ಈ ಕೇಸ್‌ನ ತನಿಖೆ ನಡಿಸಿದ್ದ ಲೋಕಾಯುಕ್ತ ಆರೋಪ ಸಾಬೀತಾಗಿಲ್ಲ ಅಂತ ಬಿ ರಿಪೋರ್ಟ್‌ ಸಲ್ಲಿಸಿತ್ತು. ಆದ್ರೆ ಇದೀಗ ಜನಪ್ರತಿನಿಧಿಗಳ ನ್ಯಾಯಾಲಯ ಈ ಕೇಸನ್ನ ಮತ್ತೆ ತನಿಖೆ ಮಾಡಿ ಅಂತ ಲೋಕಾಯುಕ್ತಕ್ಕೆ ಆದೇಶ ನೀಡಿದೆ. ಸೊ ಚುನಾವಣೆ ಟೈಮಲ್ಲಿ ಸಿಎಂ ಸಿದ್ಧರಾಮಯ್ಯಗೆ ಸಂಕಷ್ಷ ಎದುರಾಗಿದೆ. ಅತ್ತ ರಾಜ್ಯದ ACMM ಕೋರ್ಟ್‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‌ಗೆ ಸಮನ್ಸ್‌ ನೀಡಿದೆ. ಕಳೆದ ಬಿಜೆಪಿ ಅವಧಿಯಲ್ಲಿ ಮಾಜಿ ಸಿಎಂ ಬಸವರಾಜ್‌ ಬೊಮ್ಮಾಯಿ ವಿರುದ್ಧ ಬ್ರಷ್ಟಾಚಾರದ ಆರೋಪ ಹೊರಿಸಿ ಕಾಂಗ್ರೆಸ್‌ PayCM ಅಭಿಯಾನ ನಡೆಸಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರ ನಾಯಕರ ನಡೆಯಿಂದ ಬಿಜೆಪಿಗೆ ನಷ್ಟವಾಗಿದೆ ಅಂತ ವ್ಯಕ್ತಿಯೊಬ್ರು ಅರ್ಜಿ ಸಲ್ಲಿಸಿದ್ರು. ಈ ವಿಚಾರವಾಗಿ ಕೋರ್ಟ್‌ ಈಗ ನೋಟಿಸ್‌ ನೀಡಲಾಗಿದ್ದು, ಕೋರ್ಟ್‌ಗೆ ಖುದ್ದಾಗಿ ಹಾಜರಾಗುವಂತೆ ಆದೇಶಿಸಿದೆ.

-masthmagaa.com

Contact Us for Advertisement

Leave a Reply