ಪ್ರಭಾಸ್‌ ನಟನೆಯ ಆದಿಪುರುಷ ಸಿನಿಮಾಗೆ ಸ್ಟೇ ತರಲು ಹಾಕಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌!

masthmagaa.com:

ಟಾಲಿವುಡ್‌ನ ಸ್ಟಾರ್‌ ನಟ ಪ್ರಭಾಸ್‌ ನಟನೆಯ ʻಆದಿಪುರುಷ್‌ʼ ಸಿನಿಮಾದ ಬಿಡುಗಡೆಯನ್ನ ತಡೆಹಿಡಿಬೇಕು ಅಂತ ಕೋರಿ ಸಲ್ಲಿಸಿದ್ದ ಮನವಿಯನ್ನ ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. ಸಿನಿಮಾ ಬಿಡುಗಡೆಯನ್ನ ಮುಂದೂಡಿದ್ದು, ಸಿನಿಮಾದಲ್ಲಿ ಕೆಲವು ಬದಲಾವಣೆ ಮಾಡಲು ನಿರ್ಮಾಪಕರು ಮುಂದಾಗಿರುವ ಕಾರಣ ಅರ್ಜಿದಾರರಾದ ಲಾಯರ್‌ ರಾಜ್‌ ಗೌರವ್ ತಮ್ಮ ಅರ್ಜಿಯನ್ನ ಹಿಂಪಡೆಯುವುದಾಗಿ ಹೇಳಿದ್ದಾರೆ. ಈ ಕಾರಣಕ್ಕೆ ಹೈಕೋರ್ಟ್‌ ಅರ್ಜಿಯನ್ನ ವಜಾಗೊಳಿಸಿದೆ. ಅಂದ್ಹಾಗೆ ಆದಿಪುರುಷ್‌ ಚಿತ್ರದ ಟ್ರೈಲರ್‌ ರಿಲೀಸ್‌ ಆದ ಟೈಮ್‌ನಲ್ಲಿ ಹಿಂದೂಗಳ ಭಾವನೆಗೆ ನೋವಾಗಿದೆ. ಸಿನಿಮಾದಲ್ಲಿ ಶ್ರೀರಾಮ, ಹನುಮಂತ ದೇವರಿಗೆ ಲೆದರ್‌ ಕಾಸ್ಟ್ಯೂಮ್‌ ಹಾಕಲಾಗಿದೆ ಅಂತ ಭಾರಿ ವಿವಾದಕ್ಕೆ ಕಾರಣವಾಗಿತ್ತು.

-masthmagaa.com

Contact Us for Advertisement

Leave a Reply