ಕಣ್ ಹೊಡೆದ್ರೆ, ಫ್ಲೈಯಿಂಗ್ ಕಿಸ್ ಕೊಟ್ರೆ ಜೈಲು ಫಿಕ್ಸ್!

masthmagaa.com:

ಇನ್ಮುಂದೆ ಕಣ್ ಹೊಡೆಯೋರು, ಫ್ಲೈಯಿಂಗ್ ಕಿಸ್ಸನ್ನು ಹಾಗೇ ಗಾಳಿಯಲ್ಲಿ ತೇಲಿ ಬಿಡೋರು ಸ್ವಲ್ಪ ಹುಷಾರಾಗಿರಿ..ಯಾಕಂದ್ರೆ ಮುಂಬೈನಲ್ಲಿ ಇದೇ ರೀತಿ ಮಾಡಿದ ಒಬ್ಬರಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. 2020ರ ಫೆಬ್ರವರಿಯಲ್ಲಿ 14 ವರ್ಷದ ಹುಡುಗಿ ಮನೆಗೆ ಬಂದು ತಾಯಿ ಬಳಿ ನನಗೆ ಒಬ್ಬ ಕಣ್ ಹೊಡೀತಾನೆ.. ಫ್ಲೈಯಿಂಗ್ ಕಿಸ್ ಕೊಡ್ತಾನೆ ಅಂತ ಹೇಳಿಕೊಂಡಿದ್ಲು. ಅದ್ರ ಬೆನ್ನಲ್ಲೇ ಬಾಲಕಿ ಕುಟುಂಬಸ್ಥರು ತಮ್ಮ ಏರಿಯಾದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ರು. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿದ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡಿದ್ರು. ಅಲ್ಲಿಂದ ಆರೋಪಿ ಜೈಲಿನಲ್ಲೇ ಬಂಧಿಯಾಗಿದ್ದು, ತನ್ನ ಮೇಲಿನ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದ. ಆದ್ರೀಗ ಕೋರ್ಟ್​ ಹುಡುಗಿ, ಆಕೆಯ ತಾಯಿ ಮತ್ತು ಪೊಲೀಸರ ಹೇಳಿಕೆಯನ್ನೇ ಸಾಕ್ಷಿಯಾಗಿ ಪರಿಗಣಿಸಿ, ಆರೋಪಿಗೆ 1 ವರ್ಷ ಜೈಲು ಶಿಕ್ಷೆ ನೀಡಿದೆ. ಕಣ್ಣು ಹೊಡೆಯೋದು, ಫ್ಲೈಯಿಂಗ್ ಕಿಸ್ ಕೊಡೋದು ಲೈಂಗಿಕ ಕಿರುಕುಳವೇ ಆಗಿದೆ ಅಂತ ಅಭಿಪ್ರಾಯ ಪಟ್ಟಿದೆ.

-masthmagaa.com

Contact Us for Advertisement

Leave a Reply