ಪಾಕಿಸ್ತಾನಕ್ಕೆ ಹಿಂದಿರುಗಲಿರೋ ನವಾಜ್‌ ಶರೀಫ್‌ಗೆ ಕೋರ್ಟ್‌ನಿಂದ ಸಿಕ್ತು ರಿಲೀಫ್‌!

masthmagaa.com:

ಮುಂಬರುವ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಸ್ವದೇಶಕ್ಕೆ ವಾಪಸಾಗ್ತಿರೋ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಶರೀಫ್‌ಗೆ ಇಸ್ಲಮಾಬಾದ್‌ ಹೈ ಕೋರ್ಟ್‌ ಕೊಂಚ ರಿಲೀಫ್‌ ನೀಡಿದೆ. ಅವೆನ್‌ಫೀಲ್ಡ್‌ ಹಾಗೂ ಅಲ್‌-ಅಜ಼ಿಜ಼ಿಯಾ ಭ್ರಷ್ಟಾಚಾರ ಪ್ರಕರಣದ ಆರೋಪಿಯಾಗಿರೋ ನವಾಜ್‌ ಶರೀಫ್‌ ಅವರಿಗೆ ಅಕ್ಟೋಬರ್‌ 24ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ಇದರೊಂದಿಗೆ ತೋಷಾಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಭ್ರಷ್ಟಾಚಾರ ವಿರೋಧಿ ಕೋರ್ಟ್‌ ಇವರ ಅರೆಸ್ಟ್‌ ವಾರೆಂಟ್‌ನ್ನ ರದ್ದುಪಡಿಸಿದೆ. ಅಂದ್ಹಾಗೆ ನವಾಜ್‌ ಶರೀಫ್‌ ಅವರು 2019ರಿಂದ ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, ಅಕ್ಟೋಬರ್‌ 21 ರಂದು ಅಂದ್ರೆ ನಾಳೆ ಪಾಕಿಸ್ತಾನಕ್ಕೆ ಹಿಂದಿರುಗಲಿದ್ದಾರೆ.

-masthmagaa.com

Contact Us for Advertisement

Leave a Reply