ಚೀನಾದಲ್ಲಿ 6 ತಿಂಗಳಲ್ಲೆ ದಾಖಲೆಯ ಕೊರೋನಾ

masthmagaa.com:

ಚೀನಾದಲ್ಲಿ ಹೊಸದಾಗಿ 143 ಮಂದಿಯಲ್ಲಿ ಹೊಸದಾಗಿ ಕೊರೊನಾ ಪತ್ತೆಯಾಗಿದೆ. ಇದ್ರಲ್ಲಿ 108 ಚೀನಾದಲ್ಲೇ ಸ್ಥಳೀಯವಾಗಿ ಪತ್ತೆಯಾಗಿದ್ದು, ಜನವರಿ 20ರ ಬಳಿಕ ಒಂದೇ ದಿನ ಇಷ್ಟು ಪ್ರಮಾಣದಲ್ಲಿ ಕೊರೋನಾ ಪತ್ತೆಯಾಗಿರೋದು ಇದೇ ಮೊದಲು. ಇವುಗಳ ಪೈಕಿ ಹೆಚ್ಚಿನವರು ಜಿಯಾಂಗ್ಶು ಮತ್ತು ಹೆನಾನ್ ಪ್ರಾಂತ್ಯದಲ್ಲಿ ಪತ್ತೆಯಾಗಿವೆ. ಇನ್ನು ಉಳಿದ ಕೊರೋನಾ ಪ್ರಕರಣಗಳು ವಿದೇಶದಿಂದ ಬಂದವರಲ್ಲಿ ಪತ್ತೆಯಾಗಿವೆ.

ರಷ್ಯಾದಲ್ಲಿ ಆಕ್ಸಿಜನ್ ದುರಂತ ಸಂಭವಿಸಿ 9 ಮಂದಿ ಕೊರೋನಾ ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಆಕ್ಸಿಜನ್ ದುರಂತ ಅಂದ್ರೆ ಆಕ್ಸಿಜನ್ ಕೊರತೆಯಿಂದಾಗಿ ಅಲ್ಲ. ಇಲ್ಲಿನ ವ್ಲಾಡಿಕವ್​ಕಾಜ್​​ ಪ್ರದೇಶದ ಆಸ್ಪತ್ರೆಯ ಅಂಡರ್​​ಗ್ರೌಂಡ್​​ನಲ್ಲಿ ಆಕ್ಸಿಜನ್ ಪೈಪ್ ಬ್ಲಾಸ್ಟ್​ ಆಗಿ ಈ ದುರಂತ ಸಂಭವಿಸಿದೆ. ಇದ್ರಿಂದ ಆಕ್ಸಿಜನ್ ಪೂರೈಕೆ ನಿಂತು ದುರಂತ ಸಂಭವಿಸಿದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ಕೆನಡಾ ಭಾರತದ ಪ್ರಯಾಣಿಕರ ಮೇಲೆ ವಿಧಿಸಿರೋ ನಿರ್ಬಂಧವನ್ನು ಮತ್ತೆ ವಿಸ್ತರಣೆ ಮಾಡಿದೆ. ಏಪ್ರಿಲ್ 22ರಿಂದ ಈ ಬ್ಯಾನ್ ಇದ್ದು, ಈಗ ಅದನ್ನು ಮತ್ತೆ ಸೆಪ್ಟೆಂಬರ್ 21ರವರೆಗೆ ವಿಸ್ತರಣೆ ಮಾಡಲಾಗಿದೆ.

ಇನ್ನು ಅಮೆರಿಕದ ಸೇನೆಯ ಎಲ್ಲಾ ಸಿಬ್ಬಂದಿ ಸೆಪ್ಟೆಂಬರ್ ಮಧ್ಯಭಾಗದೊಳಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಅಂತ ಪೆಂಟಗಾನ್ ತಿಳಿಸಿದೆ. ಇದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ ಜೈ ಎಂದಿದ್ದಾರೆ. ಇನ್ನು ಫ್ರಾನ್ಸ್​​​​ನಲ್ಲಿ ಕೊರೋನಾ ಹೆಚ್ಚಾಗ್ತಿರೋದ್ರಿಂದ ಅಲ್ಲಿಗೆ ಪ್ರಯಾಣ ಕೈಗೊಳ್ಳೋದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ ಅಂತ ಅಮೆರಿಕ ತನ್ನ ಪ್ರಜೆಗಳಿಗೆ ಸೂಚಿಸಿದೆ.

-masthmagaa.com

Contact Us for Advertisement

Leave a Reply