ಬ್ಲಾಕ್ ಫಂಗಸ್ ಬಳಿಕ ಬಂತು ಗ್ಯಾಂಗ್ರೀನ್!

masthmagaa.com:

ಕೊರೋನಾ ಬಂದು ಚೇತರಿಸಿಕೊಳ್ಳೋದೇ ಒಂದು ದೊಡ್ಡ ಕಷ್ಟ.. ಆಸ್ಪತ್ರೇಲಿ ಬೆಡ್ ಇಲ್ಲ.. ಔಷಧ ಇಲ್ಲ.. ಆಕ್ಸಿಜನ್ ಇಲ್ಲ.. ಇಷ್ಟೆಲ್ಲಾ ಹೋರಾಟ ಮಾಡಿ ಗೆದ್ದರೂ ಅಂಥವರಲ್ಲಿ ಬೇರೆ ಬೇರೆ ವಿಚಿತ್ರ ಮತ್ತೆ ಅಪರೂಪದ ಕಾಯಿಲೆಗಳು ಕಾಣಿಸಿಕೊಳ್ತಿವೆ. ಇಷ್ಟು ದಿನ ಕೊರೋನಾ ಗುಣಮುಖರಾಗಿರೋರಿಗೆ ಬ್ಲಾಕ್​ಫಂಗಸ್ ಬರ್ತಾ ಇದ್ಯಂತೆ ಅಂತ ಕೇಳಿದ್ರಿ. ಆದ್ರೀಗ ತಜ್ಞರು ಕೊರೋನಾ ಬಂದವರಿಗೆ ಬರುತ್ತಿರೋ ಮತ್ತೊಂದು ಭಯಾನಕ ಕಾಯಿಲೆ ಬಗ್ಗೆ ಮಾಹಿತಿ ಕೊಟ್ಟಿದ್ಧಾರೆ. ಕೊರೋನಾ ಬಂದು ಹುಷಾರಾಗಿ ಮನೆಗೆ ಹೋದ ಕೆಲವರಲ್ಲಿ ಕೈ ಬೆರಳು ಮತ್ತು ಕಾಲು ಬೆರಳುಗಳ ನರಗಳಲ್ಲಿ ಬ್ಲಡ್​ ಕ್ಲಾಟ್​​ ಆಗ್ತಿದ್ದು, ಇದ್ರಿಂದ ಗ್ಯಾಂಗ್ರೀನ್​ ಉಂಟಾಗ್ತಿದೆ. ಸಮಯಕ್ಕೆ ಸರಿಯಾಗಿ ಆ ಬ್ಲಡ್​​ಕ್ಲಾಟ್​​ಗಳನ್ನು ಸರಿಪಡಿಸದೇ ಇದ್ರೆ ರೋಗಿಗಳು ಶಾಶ್ವತವಾಗಿ ಅಂಗವನ್ನೇ ಕಳೆದುಕೊಳ್ಳೋ ಅಪಾಯವಿರುತ್ತೆ ಅಂತ ತಜ್ಞರು ಎಚ್ಚರಿಸಿದ್ಧಾರೆ. ಎಚ್ಚರಿಕೆ ಮಾತ್ರವಲ್ಲ.. ಈಗಾಗಲೇ ಇಂಥಹ ಘಟನೆಗಳು ವರದಿಯಾಗಿವೆ ಕೂಡ.. ಗುಜರಾತ್​ನಲ್ಲಿ 26 ವರ್ಷದ ಹಿರ್ಜಿ ಲುಹಾರ್ ಎಂಬಾತ ಕೊರೋನಾ ಬಂದು ಗುಣಮುಖನಾಗಿದ್ದ. ಆದ್ರೆ ಒಂದು ವಾರದ ಬಳಿಕ ಕಾಲು ನೋವು ಶುರುವಾಯ್ತು. ಕಾಲು ಬಲವನ್ನೇ ಕಳೆದುಕೊಳ್ತು.. ಇದಾದ 3 ದಿನಗಳ ನಂತರ ಯುವಕನ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಅದು ಗ್ಯಾಂಗ್ರೀನ್ ಸ್ವರೂಪ ಪಡೆದುಕೊಂಡಿತ್ತು. ಸದ್ಯ ಆ ಯುವಕನ ಜೀವ ಉಳಿಸಲು ಕಾಲನ್ನೇ ತೆಗೆಯಲಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಬರೀ ಗ್ಯಾಂಗ್ರಿನ್ ಅಂತಲ್ಲ.. ಕೆಲವು ರೋಗಿಗಳು ಬ್ರೇನ್​ ಸ್ಟ್ರೋಕ್​ನಿಂದಾಗಿ ಪ್ಯಾರಾಲೈಜ್ ಆಗ್ತಿರೋ ಘಟನೆಗಳು ಕೂಡ ವರದಿಯಾಗಿವೆ. ಫ್ರೆಂಡ್ಸ್​, ಈ ಬಗ್ಗೆ ಹೆದರೋ ಅಗತ್ಯವಿಲ್ಲ.. ಆದ್ರೆ ಎಚ್ಚರಿಕೆ ಅತೀ ಅಗತ್ಯ.. ಕೊರೋನಾ ಬಂದು ಚೇತರಿಸಿಕೊಂಡೋರು ಅಷ್ಟೆ.. ಆರೋಗ್ಯವಂತರಾಗಿ ಇರೋರು ಅಷ್ಟೆ.. ಆದಷ್ಟು ಕೊರೋನಾ ನಿಯಮಗಳನ್ನು ಪಾಲಿಸಿ.. ಇಂಥಹ ಯಾವುದೇ ಸಣ್ಣ ಲಕ್ಷಣಗಳು ಕಂಡು ಬಂದ್ರೂ ವೈದ್ಯರಿಗೆ ತೋರಿಸಿ.. ಜಾಸ್ತಿಯಾದ್ಮೇಲೆ ವೈದ್ಯರ ಬಳಿ ಹೋಗೋದಲ್ಲ.. ಬ್ಲಡ್ ಕ್ಲಾಟ್ ಆದ್ರೂ ಚಿಕಿತ್ಸೆ ಮೂಲಕ ಸರಿಪಡಿಸಬಹುದು.. ತುಂಬಾ ಟೈಂ ಹಾಗೇ ಬಿಟ್ರೆ ರಕ್ತ ಸಂಚಾರಕ್ಕೆ ತಡೆಯಾಗೋದ್ರಿಂದ ಗ್ಯಾಂಗ್ರೀನ್ ಸಂಭವಿಸುತ್ತೆ.. ಅದಕ್ಕೂ ಮುನ್ನವೇ ಚಿಕಿತ್ಸೆ ತಗೊಂಡ್ರೆ ಏನೂ ಆಗಲ್ಲ..

-masthmagaa.com

Contact Us for Advertisement

Leave a Reply