ಆಗಸ್ಟ್​ ವೇಳೆಗೆ ದೇಶದಲ್ಲಿ ಕೊರೋನಾಗೆ 3 ಲಕ್ಷ ಮಂದಿ ಬಲಿ!

masthmagaa.com:

ದೇಶದಲ್ಲಿ ಮೇ ಮಧ್ಯಭಾಗದಲ್ಲಿ ಕೊರೋನಾ ಪೀಕ್​​ಗೆ ಹೋಗುತ್ತೆ. ಈ ವೇಳೆ ದೇಶದಲ್ಲಿ ಪ್ರತಿದಿನ ಸಾವನ್ನಪ್ಪುವವರ ಸಂಖ್ಯೆ 5,600ರವರೆಗೆ ಏರಿಕೆಯಾಗೋ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರಿದ್ರೆ ಏಪ್ರಿಲ್​ನಿಂದ ಆಗಸ್ಟ್​​ವರೆಗೆ ದೇಶದಲ್ಲಿ 3 ಲಕ್ಷ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಅಂತ ವಾಷಿಂಗ್ಟನ್ ವಿವಿಯ ಇನ್​​ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್​ & ಇವ್ಯಾಲ್ಯೂಯೇಷನ್ ಮಾಹಿತಿ ನೀಡಿದೆ. ಮತ್ತೊಂದ್ಕಡೆ ಭಾರತದಲ್ಲಿ ಅತಿ ವೇಗವಾಗಿ ಮುನ್ನುಗ್ಗುತ್ತಿರುವ ಹೊಸ ರೂಪಾಂತರಿ ಕೊರೋನಾದ ಶೇ.59ಕ್ಕಿಂತಲೂ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲೇ ಪತ್ತೆಯಾಗಿದೆ. ಅದು ಕೂಡ ಇಡೀ ಮಹಾರಾಷ್ಟ್ರದಲ್ಲಿ ಹಾವಳಿ ಇಡ್ತಿಲ್ಲ. ಈ ಡಬಲ್ ಮ್ಯೂಟಂಟ್ ವೈರಾಣು ಕೆಲ ಜಿಲ್ಲೆ ಮತ್ತು ಸಿಟಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡ್ತಿದೆ. ಅಂದ್ರೆ ಹರಡ್ತಿದೆ ಅಂತ ತಿಳಿದು ಬಂದಿದೆ. ಇದೇ ವೇಳೆ ಕೋವಿಶೀಲ್ಡ್​ ಮತ್ತು ಕೋವ್ಯಾಕ್ಸಿನ್ ಕೂಡ ಕೊರೋನಾದ ಹೊಸತಳಿಯ ತಡೆಯುವಲ್ಲಿ ಪರಿಣಾಮಕಾರಿ ಅಂತ ವರದಿ ತಿಳಿಸಿದೆ.

-masthmagaa.com

Contact Us for Advertisement

Leave a Reply