ಸದ್ಯಕ್ಕೆ ಟಫ್‌ ರೂಲ್ಸ್‌ ಜಾರಿ ಇಲ್ಲ ಆದ್ರೆ

masthmagaa.com:

ಕ್ರಮೇಣವಾಗಿ ಕೊರೊನಾ ಪ್ರಕರಣಗಳು ಜಾಸ್ತಿ ಆಗ್ತಾ ಇದ್ದು, ನಾಲ್ಕನೇ ಅಲೆಯ ಕರಿಛಾಯೆ ಮೇಲೆದ್ದಿದ್ದೆ. ಇದ್ರ ಬೆನ್ನಲ್ಲೇ ಪ್ರಧಾನಿ ಮೋದಿ ಇವತ್ತು ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತಾಡಿರೋ ಪ್ರಧಾನಿ ಮೋದಿ, ಎಲ್ಲ ಅರ್ಹ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಹಾಕಿಸುವುದು ಸರ್ಕಾರದ ಆದ್ಯತೆಯಾಗಿದೆ. ಇದಕ್ಕಾಗಿ ಶಾಲೆಗಳಲ್ಲಿ ವಿಶೇಷ ಯೋಜನೆಗಳನ್ನ ಹಮ್ಮಿಕೊಳ್ಳಬೇಕು ಅಂತ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಟೆಸ್ಟ್‌, ಟ್ರ್ಯಾಕ್‌ ಮತ್ತು ಟ್ರೀಟ್‌ ಎಂಬ ಸ್ಟ್ರಟಜಿಯನ್ನ ನಾವು ಜಾರಿಗೆ ತರ್ಬೇಕು. ಆಸ್ಪತ್ರೆಯಲ್ಲಿರುವ ಎಲ್ಲ ರೋಗಿಗಳಿಗೆ 100% ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸೋದು ತುಂಬಾ ಮುಖ್ಯ ಅಂತ ಹೇಳಿದ್ದಾರೆ. ಇನ್ನು ಸಭೆ ನಂತ್ರ ಸುದ್ಧಿಗಾರರೊಂದಿಗೆ ಮಾತಾಡಿರೋ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಕೋವಿಡ್‌ ನಿಯಂತ್ರಿಸುವ ವಿಚಾರದಲ್ಲಿ ಅನಗತ್ಯ ನಿರ್ಬಂಧಗಳನ್ನ ಹೇರಬಾರ್ದು ಅಂತ ಪ್ರಧಾನಿ ಮೋದಿ ಸೂಚಿಸಿದಾರೆ ಅಂತ ತಿಳಿಸಿದ್ದಾರೆ. ಜೊತೆಗೆ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಸಿದ್ಧ ಮಾಡಿಟ್ಟಕೊಳ್ಳುವಂತೆ ಸೂಚಿಸಿದ್ದಾರೆ ಅಂತ ಹೇಳಿದ್ದಾರೆ. ಸೋ ಅಲ್ಲಿಗೆ ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಟಫ್‌ ರೂಲ್ಸ್‌ಗಳು ಜಾರಿಯಾಗ್ತಿಲ್ಲ ಅಂತ ಆಯ್ತು. ಆದ್ರೆ ಮಾಸ್ಕ್‌ ಧರಿಸೋದು, ಅಂತರ ಕಾಯ್ದುಕೊಳ್ಳೋದು ಮಾತ್ರ ಇರಲಿದೆ.

-masthmagaa.com

Contact Us for Advertisement

Leave a Reply