ವೈರಸ್ ಮೂಲ: ನಮ್ ಕೈಲಾಗಲ್ಲ ಅಂತ ಸೋಲೊಪ್ಪಿಕೊಂಡ ಅಮೆರಿಕ

masthmagaa.com:

ಕೊರೋನ ನೈಸರ್ಗಿಕವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿತಾ? ಅಥವಾ ಉದ್ದೇಶಪೂರ್ವಕವಾಗಿ ಇದನ್ನ ಲ್ಯಾಬ್‌ನಲ್ಲಿ ಸೃಷ್ಟಿ ಮಾಡಿ ಅಸ್ತ್ರವಾಗಿ ಪ್ರಯೋಗ ಮಾಡಲಾಯಿತಾ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯೋಕೆ ಹೊರಟಿದ್ದ ಅಮೆರಿಕದ ಗುಪ್ತಚರ ಸಂಸ್ಥೆಗೆ ನಿರಾಸೆಯಾಗಿದೆ. ನಾವು ಈ ಸತ್ಯವನ್ನ ಯಾವತ್ತೂ ಪತ್ತೆಹಚ್ಚಲು ಸಾಧ್ಯವಾಗಲ್ವೇನೋ ಅಂತ ಅಮೆರಿಕದ ಡೈರೆಕ್ಟರ್ ಆಫ್ ನ್ಯಾಶನಲ್ ಇಂಟೆಲಿಜೆನ್ಸ್ ಅವರ ಆಫೀಸ್ ಹೇಳಿದೆ. ಕೊರೋನ ಹುಟ್ಟಿದ ಚೀನಾದ ವುಹಾನ್ ನಲ್ಲಿ ತನಿಖೆ ಮಾಡೋಕೆ ಚೀನಾ ಅಲ್ಮೋಸ್ಟ್ ಒಂದು ವರ್ಷ ಅವಕಾಶವೇ ಕೊಡಲಿಲ್ಲ. ಇಡೀ ಸೀಫುಡ್ ಮಾರ್ಕೆಟ್‌ನಲ್ಲಿ ಯಾವುದೇ ಸಾಕ್ಷ್ಯ ಸಿಗದಷ್ಟು ಸಮಯ ಕಳೆದುಹೋದ ಮೇಲೆ ಅವಕಾಶ ಕೊಡ್ತು. ನಂತರ ಹೋದ ತನಿಖಾ ತಂಡಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ವುಹಾನ್ ನ ಆಸ್ಪತ್ರೆಗಳು ಕೂಡ ಸರಿಯಾದ ರೀತಿಯಲ್ಲಿ ತನಿಖಾ ತಂಡಕ್ಕೆ ಸಹಕಾರ ನೀಡಲಿಲ್ಲ. ಒಂದಷ್ಟು ದಾಖಲೆಗಳನ್ನ ಡಿಲೀಟ್ ಕೂಡ ಮಾಡಲಾಯ್ತು. ಹೀಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್., ತಮ್ಮ ಸೀಕ್ರೆಟ್ ಏಜೆನ್ಸಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಆದ್ರೆ 2 ವರ್ಷ ಕಂಪ್ಲೀಟ್ ಆಗ್ತಾ ಬಂತು. ಇದುವೆಗೂ ಕೊರೋನ ಮೂಲ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆದ್ರೆ ಈ ವೈರಾಣು ಮನುಷ್ಯನಿಗೆ ಪ್ರಾಣಿಗಳಿಂದ ಹರಡಿರೋ ಚಾನ್ಸಸ್ ಹಾಗೂ ಲ್ಯಾಬ್ ನಿಂದ ಲೀಕ್ ಆಗಿರೋ ಚಾನ್ಸಸ್.. ಎರಡೂ ಸಾಧ್ಯತೆ ಇರಬಹುದು ಅಂತ ಈ ವರದಿ ಹೇಳಿದೆ. ಇದೇ ವೇಳೆ ಈ ವೈರಾಣುವನ್ನ ಒಂದು ಜೈವಿಕ ಅಸ್ತ್ರವಾಗಿ ಡೆವಲಪ್ ಮಾಡಿ ಬಳಿಕ ಮನುಷ್ಯರಿಗೆ ಹರಡಲಾಗಿದೆ ಅನ್ನೋ ಆರೋಪಗಳು ಸಧ್ಯಕ್ಕೆ ನಿರಾಧಾರ. ಈ ರೀತಿ ಆರೋಪ ಮಾಡುತ್ತಿರೋರು ಯಾವತ್ತೂ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಹೋಗಿ ಚೆಕ್ ಮಾಡಿಲ್ಲ ಅಂತಲೂ ಅಮೆರಿಕದ ಈ ಗುಪ್ತಚರ ವರದಿ ಹೇಳಿದೆ.

-masthmagaa.com

Contact Us for Advertisement

Leave a Reply